ಮಳೆಗಾಲದಲ್ಲಿ ತ್ವಚೆಯನ್ನು ಕಾಂತಿಯುತವಾಗಿ ಇಡುವುದು ನಿಜವಾದ ಸವಾಲು. ಬೇಸಿಗೆಯಲ್ಲಿ ಒಣಗಿದ ಚರ್ಮ ಚಳಿಗೆ ಸುಲಭದಲ್ಲಿ ಒಗ್ಗಿಕೊಳ್ಳುವುದಿಲ್ಲ. ಅದನ್ನು ರಕ್ಷಿಸುವ ವಿಧಾನಗಳನ್ನು ತಿಳಿಯೋಣ.
ಮಾರುಕಟ್ಟೆಯಲ್ಲಿ ಸಿಗುವ ಸೋಪುಗಳ ಬಳಕೆ ಮಾಡುವ ಬದಲು ಕಡ್ಲೆಹಿಟ್ಟು ಬಳಕೆ ಮಾಡುವುದು ಒಳ್ಳೆಯದು. ನಿತ್ಯ ಸ್ನಾನ ಮಾಡುವಾಗ ಬಿಸಿ ನೀರು ಬಳಕೆ ಮಾಡುವ ಬದಲು ತಣ್ಣೀರು ಅಥವಾ ಉಗುರು ಬಿಸಿ ನೀರು ಬಳಸಿ, ಹೊರಗೆ ಹೋಗುವಾಗ ಮೇಕಪ್ ಹಾಕಿದರೆ ಬಂದಾಕ್ಷಣ ತೆಗೆಯಿರಿ. ಮಲಗುವ ಮೊದಲು ತಣ್ಣೀರಿನಿಂದ ಮುಖ ತೊಳೆದುಕೊಳ್ಳಿ. ವಾರಕ್ಕೆ ಎರಡು ದಿನ ಅಲೋವೆರಾ ಜೆಲ್ ಹಚ್ಚಿ.
ನೈಸರ್ಗಿಕ ಹಣ್ಣುಗಳಾದ ಬಾಳೆಹಣ್ಣು, ಕಲ್ಲಂಗಡಿ ಹಣ್ಣುಗಳನ್ನು ಬಳಸಿ. ಮುಖಕ್ಕೆ ಮಸಾಜ್ ಮಾಡಿ, ಆದಷ್ಟು ಎಣ್ಣೆ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಿ, ದಿನಕ್ಕೆ 5 ರಿಂದ 6 ಬಾರಿ ತಣ್ಣೀರಿನಿಂದ ಮುಖ ತೊಳೆಯಿರಿ. ರೋಸ್ ವಾಟರ್ ಹಚ್ಚಿ ಮುಖ ತೊಳೆಯಿರಿ.
ಪುದೀನಾ ಎಲೆ ಚೆನ್ನಾಗಿ ತೊಳೆದು ನುಣ್ಣಗೆ ಅರೆದು ಅದಕ್ಕೆ ಸ್ವಲ್ಪ ರೋಸ್ ವಾಟರ್ ಹಾಗೂ ಒಂದೆರಡು ಹನಿ ಗ್ಲಿಸರಿನ್ ಹಾಕಿ ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿಕೊಂಡು ಸ್ವಲ್ಪ ಸಮಯ ಬಿಟ್ಟು ತೊಳೆಯಿರಿ. ಇದರಿಂದ ಮುಖದ ಕಾಂತಿ ಹೆಚ್ಚುತ್ತದೆ.