ಗಾರ್ಲಿಕ್ ಬ್ರೆಡ್ ಹೆಸರು ಕೇಳ್ತಾ ಇದ್ದಂತೆ ಮಕ್ಕಳ ಬಾಯಲ್ಲಿ ನೀರು ಬರುತ್ತದೆ. ಹೊರಗಡೆಯಿಂದ ಗಾರ್ಲಿಕ್ ಬ್ರೆಡ್ ತರುವ ಬದಲು ಮನೆಯಲ್ಲಿಯೇ ಸುಲಭವಾಗಿ ಗಾರ್ಲಿಕ್ ಬ್ರೆಡ್ ಮಾಡಿ. ಸಂಜೆ ಟೀ ಜೊತೆ ರುಚಿರುಚಿ ಬ್ರೆಡ್ ಸವಿಯಿರಿ.
ಗಾರ್ಲಿಕ್ ಬ್ರೆಡ್ ಮಾಡಲು ಬೇಕಾಗುವ ಪದಾರ್ಥ:
2 ಬ್ರೆಡ್, ಸಣ್ಣದಾಗಿ ಹೆಚ್ಚಿಕೊಂಡ 4 ಬೆಳ್ಳುಳ್ಳಿ ಮೊಗ್ಗು, ರುಚಿಗೆ ತಕ್ಕಷ್ಟು ತುಪ್ಪ, ಒಂದು ಚೀಸ್, 2 ಚಮಚ ಕಾಳು ಮೆಣಸಿನ ಪುಡಿ.
ಗಾರ್ಲಿಕ್ ಬ್ರೆಡ್ ಮಾಡುವ ವಿಧಾನ :
ಒಂದು ತವಾ ಬಿಸಿಗಿಡಿ. ಒಂದು ಭಾಗಕ್ಕೆ ತುಪ್ಪ ಸವರಿದ ಬ್ರೆಡ್ ತವಾ ಮೇಲಿಡಿ. ಸ್ವಲ್ಪ ಬಿಸಿಯಾಗ್ತಿದ್ದಂತೆ ಇನ್ನೊಂದು ಭಾಗಕ್ಕೆ ಚೀಸ್ ಹಚ್ಚಿ ಮತ್ತೆ ತವಾ ಮೇಲಿಡಿ. ಚೀಸ್ ಹಚ್ಚಿದ ಬ್ರೆಡ್ ಭಾಗಕ್ಕೆ ಸಣ್ಣಗೆ ತುಂಡು ಮಾಡಿದ ಬೆಳ್ಳುಳ್ಳಿಯನ್ನು ಹಾಕಿ. ಇದ್ರ ಮೇಲೆ ಕಾಳು ಮೆಣಸಿನ ಪುಡಿಯನ್ನು ಉದುರಿಸಿ.
ಬ್ರೆಡ್ ಮೇಲಿರುವ ಬೆಳ್ಳುಳ್ಳಿ ಬ್ರೆಡ್ ಗೆ ಸರಿಯಾಗಿ ಅಂಟಿಕೊಳ್ಳುವವರೆಗೆ ಬ್ರೆಡ್ ಬಿಸಿ ಮಾಡಿ. 175 ಡಿಗ್ರಿ ಸೆಲ್ಸಿಯಸ್ ನಲ್ಲಿ 4-5 ಮಿನಿಟ್ ಓವನ್ ನಲ್ಲಿ ಕೂಡ ಇದನ್ನು ಗ್ರಿಲ್ ಮಾಡಬಹುದು.