ಸಂಜೆಯ ಸ್ನ್ಯಾಕ್ಸ್ ಗೆ ಬ್ರೆಡ್ ಚೀಸ್ ಬಾಲ್ ಮಾಡಿಕೊಂಡು ಮನೆ ಮಂದಿಯೆಲ್ಲಾ ಸವಿಯಿರಿ. ಎರಡು ಪೀಸ್ ಇದ್ದರೆ ರುಚಿಕರವಾದ ಈ ಸ್ನ್ಯಾಕ್ಸ್ ಅನ್ನು ಮಾಡಿಕೊಂಡು ಸವಿಯಬಹುದು.
ಬೇಕಾಗುವ ಸಾಮಾಗ್ರಿಗಳು:
2 – ಬೇಯಿಸಿದ ಆಲೂಗಡ್ಡೆ, 1-ಹಸಿ ಮೆಣಸು, ½ ಟೀ ಸ್ಪೂನ್-ಶುಂಠಿ ಪೇಸ್ಟ್, 2-ಕೊತ್ತಂಬರಿ ಸೊಪ್ಪು, ¼ ಟೀ ಸ್ಪೂನ್-ಕಾಳು ಮೆಣಸಿನ ಪುಡಿ, ¼ ಟೀ ಸ್ಪೂನ್ – ಜೀರಿಗೆಪುಡಿ, ½ ಟೀ ಸ್ಪೂನ್ ಜೀರಿಗೆ, 2 ಪೀಸ್ ಬ್ರೆಡ್, 10 ಕ್ಯೂಬ್ಸ್- ಚೀಸ್, 1 ಕಪ್ – ಕಾರ್ನ್ ಫ್ಲೇಕ್ಸ್, 2 ಟೇಬಲ್ ಸ್ಪೂನ್-ಕಾರ್ನ್ ಫ್ಲೋರ್, 2 ಟೇಬಲ್ ಸ್ಪೂನ್ – ಮೈದಾ, ¼ ಟೀ ಸ್ಪೂನ್ – ಕಾಳುಮೆಣಸಿನ ಪುಡಿ, ¼ ಟೀ ಸ್ಪೂನ್ – ಉಪ್ಪು, ¼ ಕಪ್ – ನೀರು.
ಮಾಡುವ ವಿಧಾನ:
ಮೊದಲಿಗೆ ಒಂದು ಬೌಲ್ ಗೆ ಬೇಯಿಸಿದ ಆಲೂಗಡ್ಡೆ ಹಾಕಿ ನಂತರ ಇದಕ್ಕೆ ಹಸಿಮೆಣಸು, ಶುಂಠಿ, ಕೊತ್ತಂಬರಿ ಸೊಪ್ಪು, ಕಾಳುಮೆಣಸಿನ ಪುಡಿ, ಜೀರಿಗೆ ಪುಡಿ, ಉಪ್ಪು ಸೇರಿಸಿ. ನಂತರ ಅದಕ್ಕೆ 2 ಬ್ರೆಡ್ ಅನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಚಪಾತಿ ಹಿಟ್ಟಿನ ಮುದ್ದೆ ರೀತಿ ಮಾಡಿಕೊಳ್ಳಿ.
ನಂತರ ಇನ್ನೊಂದು ಬೌಲ್ ಗೆ 2 ಟೇಬಲ್ ಸ್ಪೂನ್ ಕಾರ್ನ್ ಫ್ಲೋರ್, ಮೈದಾ, ಕಾಳುಮೆಣಸಿನ ಪುಡಿ, ಉಪ್ಪು, ನೀರು ಸೇರಿಸಿ ಗಂಟಿಲ್ಲದಂತೆ ಕಲಸಿಕೊಳ್ಳಿ. ನಂತರ ಆಲೂಗಡ್ಡೆಯಿಂದ ಹಿಟ್ಟಿನಿಂದ ಚಿಕ್ಕ ಚಿಕ್ಕ ಉಂಡೆ ಮಾಡಿಕೊಂಡು ಕೈಯಿಂದ ಸ್ವಲ್ಪ ತಟ್ಟಿಕೊಳ್ಳಿ. ನಂತರ ಅದರ ಮಧ್ಯೆ ಚೀಸ್ ಕ್ಯೂಬ್ಸ್ ಇಟ್ಟು ಉಂಡೆ ಕಟ್ಟಿ. ಇದನ್ನು ಕಾರ್ನ್ ಫ್ಲೋರ್ ಹಿಟ್ಟಿನಲ್ಲಿ ಮುಳುಗಿಸಿ. ನಂತರ ಕಾರ್ನ್ ಫ್ಲೇಕ್ಸ್ ನಲ್ಲಿ ಹೊರಳಾಡಿಸಿ ಎಣ್ಣೆಯಲ್ಲಿ ಕರಿಯಿರಿ.