ಚಿಕ್ಕ ವಯಸ್ಸಿನಿಂದ ಹಿಡಿದು ವಯಸ್ಕರ ತನಕ ಬಹುತೇಕರು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇದರಿಂದ ಹಲವಾರು ಕಾಯಿಲೆಗಳು ಮುತ್ತಿಕೊಳ್ಳುತ್ತವೆ. ಬೊಜ್ಜಿನಿಂದ ದೂರವಿರಲು ಹೀಗೆ ಮಾಡಿ.
ನಿಯಮಿತವಾಗಿ ವ್ಯಾಯಾಮ ಮಾಡಿ. ಹೆಚ್ಚಿನ ಯೋಗಾಭ್ಯಾಸಗಳ ಅರಿವಿಲ್ಲದಿದ್ದರೆ ಸೂರ್ಯ ನಮಸ್ಕಾರ ಮಾಡಿ. ಇದರಿಂದ ಬಂಜೆತನ, ಮುಟ್ಟಿನ ಸಮಸ್ಯೆ, ಅಂಡಾಣು ಮತ್ತು ವೀರ್ಯಾಣು ಬಿಡುಗಡೆ ಕೊರತೆಯನ್ನು ತಡೆಯಬಹುದು.
ಸರಿಯಾದ ಸಮಯಕ್ಕೆ ಆಹಾರ ಸೇವಿಸಿ. ಸಿಹಿ ತಿಂಡಿ, ಅತಿಯಾದ ಆಹಾರ ಸೇವನೆ, ಜಂಕ್ ಫುಡ್, ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ತಿನ್ನುವುದರಿಂದ ಬೊಜ್ಜು ಬೆಳೆಯುತ್ತದೆ. ಅವುಗಳಿಂದ ಸಾಧ್ಯವಾದಷ್ಟು ದೂರವಿರಿ. ಪ್ರೊಟೀನ್ ಮತ್ತು ವಿಟಮಿನ್ ಇರುವಂತಹ ಆಹಾರವನ್ನು ಸೇವಿಸಿ.