1 ಕಪ್-ಮೈದಾ ಹಿಟ್ಟು, ¼ ಕಪ್-ಸಕ್ಕರೆ, ಉಪ್ಪು ರುಚಿಗೆ ತಕ್ಕಷ್ಟು, ½ ಕಪ್-ಮೊಸರು, ನೀರು-ಸ್ವಲ್ಪ, 1/4 ಟೀ ಸ್ಪೂನ್-ಬೇಕಿಂಗ್ ಸೋಡಾ, 2 ಹಸಿಮೆಣಸು, ಕೊತ್ತಂಬರಿ ಸೊಪ್ಪು-1 ಟೇಬಲ್ ಸ್ಪೂನ್, ಸ್ವಲ್ಪ-ಶುಂಠಿ ತುರಿ, ಕರಿಬೇವು-ಸ್ವಲ್ಪ.
ಮಾಡುವ ವಿಧಾನ:
ಮೊದಲಿಗೆ ಒಂದು ಪಾತ್ರೆಗೆ ಮೈದಾ ಹಿಟ್ಟು, ಸಕ್ಕರೆ, ಉಪ್ಪು, ಮೊಸರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಸ್ವಲ್ಪ ಸ್ವಲ್ಪ ನೀರು ಸೇರಿಸಿ ಸಕ್ಕರೆ ಕರಗುವವರೆಗೆ ಚೆನ್ನಾಗಿ ಮಿಶ್ರಣ ಮಾಡಿ.
ನಂತರ ಇದಕ್ಕೆ ಬೇಕಿಂಗ್ ಸೋಡಾ ಸೇರಿಸಿ ಆಮೇಲೆ ಕೊತ್ತಂಬರಿ ಸೊಪ್ಪು, ಹಸಿಮೆಣಸು, ಶುಂಠಿ, ಕರಿಬೇವು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಹಿಟ್ಟು ತುಂಬಾ ನೀರು ಮಾಡುವುದು ಬೇಡ. ನಂತರ ಕಾದ ಎಣ್ಣೆಯಲ್ಲಿ ಸ್ವಲ್ಪ ಸ್ವಲ್ಪ ಹಿಟ್ಟು ಹಾಕಿ ಕರಿಯಿರಿ.