alex Certify ಇಲ್ಲಿದೆ ಬಾಲಿವುಡ್‌ ನ ಅತ್ಯಂತ ಸೊಕ್ಕಿನ ನಟ – ನಟಿಯರ ಪಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಬಾಲಿವುಡ್‌ ನ ಅತ್ಯಂತ ಸೊಕ್ಕಿನ ನಟ – ನಟಿಯರ ಪಟ್ಟಿ

ಬಾಲಿವುಡ್ ತಾರೆಯರ ಬಗ್ಗೆ ಒಂದಿಲ್ಲೊಂದು ಇಂಟ್ರೆಸ್ಟಿಂಗ್‌ ಸಂಗತಿಗಳು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸುತ್ತವೆ. ಬಾಲಿವುಡ್‌ ಸ್ಟಾರ್‌ಗಳ ಪೈಕಿ ಕೆಲವರು ಸರಳ, ಸಜ್ಜನಿಕೆಯ ವರ್ತನೆ ಹೊಂದಿದ್ರೆ, ಇನ್ನು ಕೆಲವರು ಭಯಂಕರ ಸೊಕ್ಕಿನವರು. ಅವರ ದುರಹಂಕಾರದ ವರ್ತನೆ ಆಗಾಗ ಚರ್ಚೆಗೆ ಗ್ರಾಸವಾಗುತ್ತಲೇ ಇರುತ್ತದೆ. ಕರೀನಾ, ಪ್ರಿಯಾಂಕಾ ಕೂಡ ಇದರಿಂದ ಹೊರತಾಗಿಲ್ಲ.

ಪ್ರಿಯಾಂಕಾ ಚೋಪ್ರಾ: ಒಮ್ಮೆ ಪ್ರಿಯಾಂಕಾ ಚೋಪ್ರಾ ವಿಮಾನದಲ್ಲಿ ಪ್ರಯಾಣಿಕನೊಂದಿಗೆ ಜಗಳವಾಡಿದ್ದರು. ಈ ವೇಳೆ ನಟಿ ಅಸಭ್ಯ ಭಾಷೆಯನ್ನೂ ಬಳಸಿದ್ದಾರೆ.

ಗೋವಿಂದ : ಖ್ಯಾತ ಹಾಸ್ಯ ನಟ ಗೋವಿಂದ ಕೂಡ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. 2008 ರಲ್ಲಿ  ಗೋವಿಂದ, ಸಂತೋಷ್ ರೈ ಎಂಬ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ್ದರು. ವ್ಯಕ್ತಿ ದೂರು ನೀಡಿದ ನಂತರ, ನ್ಯಾಯಾಲಯವು ಗೋವಿಂದ ಕ್ಷಮೆಯಾಚಿಸುವಂತೆ ಆದೇಶಿಸಿತ್ತು.

ಕರೀನಾ ಕಪೂರ್ ಖಾನ್: ಬೇಬೋ ಎಂದು ಖ್ಯಾತರಾಗಿರೋ ಕರೀನಾ ಅಷ್ಟೇನೂ ಸರಳ ವ್ಯಕ್ತಿತ್ವ ಹೊಂದಿಲ್ಲ. ಯಾವಾಗಲೂ ಮಾಧ್ಯಮದವರ ಮೇಲೆ ಹರಿಹಾಯುತ್ತಲೇ ಇರುತ್ತಾರೆ. ಅಷ್ಟೇ ಅಲ್ಲ ಸಹ ನಟರೊಂದಿಗೂ ಆಗಾಗ ಕಿರಿಕ್‌ ಮಾಡಿಕೊಳ್ತಾರೆ. ಅಭಿಮಾನಿಗಳೊಂದಿಗೆ ಕೂಡ ಸಜ್ಜನಿಕೆಯಿಂದ ವರ್ತಿಸದೇ ದುರಹಂಕಾರ ತೋರಿಸುತ್ತಾರೆ. ಈ ಬಗ್ಗೆ ಆಗಾಗ ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಇರುತ್ತದೆ.

ಸಲ್ಮಾನ್‌ ಖಾನ್‌: ನಟ ಸಲ್ಮಾನ್‌ ಖಾನ್‌ ಬಗ್ಗೆ ಎಲ್ರಿಗೂ ಗೊತ್ತೇ ಇದೆ. ಅಭಿಮಾನಿಗಳು, ಮಾಧ್ಯಮದವರೊಂದಿಗೆ ಕೆಟ್ಟದಾಗಿ ವರ್ತಿಸುವ ಬಿಟೌನ್‌ ತಾರೆಗಳಲ್ಲಿ ಸಲ್ಮಾನ್‌ ಕೂಡ ಒಬ್ಬರು. ಅನೇಕ ಬಾರಿ ಸಹ ನಟ, ನಟಿಯರ ಮೇಲೂ ಕೋಪ ತೋರಿಸಿದ್ದಾರೆ ಸಲ್ಲು. ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಂದಾಗುವ ಅಭಿಮಾನಿಗಳ ಮೇಲೆ ಸಲ್ಮಾನ್ ಸಿಟ್ಟಾಗುತ್ತಾರೆ.

ಐಶ್ವರ್ಯಾ ರೈ: ಬಚ್ಚನ್‌ ಕುಟುಂಬದ ಸೊಸೆ, 1994ರಲ್ಲಿ ವಿಶ್ವಸುಂದರಿ ಕಿರೀಟ ಗೆದ್ದ ನಟಿ ಐಶ್ವರ್ಯಾ ರೈ ಕೂಡ ಸೊಕ್ಕಿನ ಮುದ್ದೆ ಎಂಬ ಟೀಕೆಯಿದೆ. ಐಶ್ವರ್ಯಾ ರೈ ಬಚ್ಚನ್, ಬಾಲಿವುಡ್‌ನ  ಅತ್ಯಂತ ಸೊಕ್ಕಿನ ನಟಿ ಎಂದು ಕರೆಯಲಾಗುತ್ತದೆ.  ಐಶ್ವರ್ಯಾ ಕೂಡ ಮಾಧ್ಯಮದವರು, ಅಭಿಮಾನಿಗಳಿಂದ ಅಂತರ ಕಾಯ್ದುಕೊಳ್ಳುತ್ತಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...