
1. ಭರ್ವಾನ್ ಹರಿ ಮಿರ್ಚ್ ಮ್ಯಾಗಿ:
ನೀವು ಸ್ಟಫ್ಡ್ ಕ್ಯಾಪ್ಸಿಕಂ ಅನ್ನು ಸವಿದಿರಬಹುದು. ಆದರೆ ಈ ಮಿರ್ಚಿ ಮ್ಯಾಗಿಯನ್ನು ಎಂದಾದ್ರೂ ಸವಿದಿದ್ದೀರಾ..? ಈ ವಿಲಕ್ಷಣ ಖಾದ್ಯದಲ್ಲಿ ಹಸಿರು ಮೆಣಸಿನಕಾಯಿಗಳ ಮಧ್ಯದಲ್ಲಿ ಬೇಯಿಸಿದ ಮ್ಯಾಗಿ ತುಂಬಿಸಲಾಗುತ್ತದೆ. ಇದುವೆ ಸ್ಪೆಷಲ್ ಭರ್ವಾನ್ ಹರಿ ಮಿರ್ಚಿ ಮ್ಯಾಗಿ.
2. ಮ್ಯಾಗಿ ಮಿಲ್ಕ್ ಶೇಕ್:
ನಾವು ತಿಳಿದಿರುವಂತೆ ಮ್ಯಾಗಿಯನ್ನು ಆಹಾರಪ್ರಿಯರು ತುಂಬಾ ಇಷ್ಟಪಡುತ್ತಾರೆ. ಆದರೆ, ಈ ಮ್ಯಾಗಿ ಮಿಲ್ಕ್ ಶೇಕ್ ನಲ್ಲಿ ಬೇಯಿಸಿದ ಮ್ಯಾಗಿಯನ್ನು ಜ್ಯೂಸ್ ನ ಮೇಲ್ಭಾಗದಲ್ಲಿ ಹಾಕಲಾಗುತ್ತದೆ.
3. ಮಕ್ಕಿ ದಿ ರೊಟ್ಟಿ ಮ್ಯಾಗಿಮಕ್ಕಿ ಡಿ ರೋಟಿ:
ಚಳಿಗಾಲದ ತಿಂಗಳುಗಳಲ್ಲಿ ಭಾರತದ ಹಲವೆಡೆ ರೊಟ್ಟಿಯನ್ನು ಸೇವಿಸಲಾಗುತ್ತದೆ. ಇದೀಗ ಚಳಿಗಾಲ ಅಂತಲ್ಲ ಎಲ್ಲಾ ಟೈಮ್ ನಲ್ಲೂ ಸೇವಿಸುವಂಥ ರೊಟ್ಟಿ ಬಹಳ ಜನಪ್ರಿಯ ತಿನಿಸಾಗಿದೆ. ಆದರೆ ರೊಟ್ಟಿಯನ್ನು ಮ್ಯಾಗಿ ನೂಡಲ್ಸ್ ಜೊತೆ ಜೋಡಿಸುವುದನ್ನು ನೀವು ಊಹಿಸಬಲ್ಲಿರಾ?. ಇಲ್ಲಿದೆ ನೋಡಿ ಸ್ಪೆಷಲ್ ಆಗಿ ಮಾಡಿರುವ ಮ್ಯಾಗಿ ಮಕ್ಕಿ ಡಿ ರೋಟಿ.
4. ಮ್ಯಾಗಿ ಕೆ ಪಕೋಡ:
ಮಳೆ ಹುಯ್ಯುತ್ತಾ ಇದ್ದರೆ ಹೆಚ್ಚಿನವರು ಚಹಾ ಜೊತೆ ಪಕೋಡ ಸೇವಿಸಲು ಇಷ್ಟಪಡುತ್ತಾರೆ. ಆದರೆ, ನೀವು ಎಂದಾದ್ರೂ ಮ್ಯಾಗಿ ಪಕೋಡ ತಿಂದಿದ್ದೀರಾ..? ಜನಪ್ರಿಯ ಆಹಾರ ಬ್ಲಾಗರ್ನಿಂದ ಸೆರೆಹಿಡಿದ ಈ ವಿಲಕ್ಷಣವಾದ ಮ್ಯಾಗಿ ಕೆ ಪಕೋಡ್ ಇದೀಗ ಹಲವರ ಹುಬ್ಬೇರಿಸಿದೆ.
5. ಮ್ಯಾಗಿ ಪಾನಿಪುರಿ:
ಪಾನಿಪುರಿ ಒಂದು ಪ್ರಸಿದ್ಧ ಸ್ಟ್ರೀಟ್ ಫುಡ್ ಆಗಿದ್ದು, ಬಹಳಷ್ಟು ಜನ ಇದನ್ನು ಇಷ್ಟಪಡುತ್ತಾರೆ. ಇದೀಗ ಪುರಿಯ ಮಧ್ಯದಲ್ಲಿ ಮ್ಯಾಗಿ ಸೇರಿಸಿದ್ದು, ಇದು ಮ್ಯಾಗಿ ಪಾನಿಪುರಿ ಆಗಿದೆ. ಆದರೆ, ಪಾನಿಪುರಿ ಪ್ರೇಮಿಗಳು ಈ ಫೋಟೋ ನೋಡಿ ಜೀರ್ಣಿಸಿಕೊಳ್ಳಲು ಕಷ್ಟಪಟ್ಟರು.
6. ಮ್ಯಾಗಿ ಲಡ್ಡು:
ಸಾಮಾನ್ಯವಾಗಿ ಎಳ್ಳುಂಡೆ, ಶೇಂಗಾ ಉಂಡೆ (ಲಡ್ಡು) ಅಥವಾ ಅವಲಕ್ಕಿ ಉಂಡೆ ತಿಂದಿರುತ್ತೀರಾ.. ಆದರೆ ಈ ಮ್ಯಾಗಿ ಲಡ್ಡು ಬಗ್ಗೆ ಕೇಳಿದ್ದೀರಾ. ಇದನ್ನು ಕೂಡ ಸಿಹಿತಿನಿಸಾಗಿ ತಯಾರಿಸಲಾಗಿದ್ದು, ಮ್ಯಾಗಿ ನೂಡಲ್ಸ್ ಅನ್ನು ಲಡ್ಡು ಶೇಪ್ ಗೆ ತರಲಾಗಿದೆ. ಇದರ ಮೇಲೆ ಡ್ರೈ ಫ್ರೂಟ್ಸ್ ಅನ್ನು ಇಡಲಾಗಿದೆ.
7. ಚಾಕೊಲೇಟ್ ಮ್ಯಾಗಿ:
ಮೇಲಿನ ಎಲ್ಲಾ ಖಾದ್ಯಗಳಿಗಿಂತಲೂ ಇದು ವಿಭಿನ್ನವಾಗಿದೆ. ಬಿಸಿ ನೀರಿಗೆ ಮ್ಯಾಗಿ ನೂಡಲ್ಸ್ ಹಾಕಲಾಗುತ್ತದೆ. ಬಳಿಕ ಓರಿಯೋ ಬಿಸ್ಕತ್ತು ಹಾಕಿ ಫ್ರೈ ಮಾಡಿ, ಬೌಲ್ ಗೆ ಟ್ರಾನ್ಸ್ ಫರ್ ಮಾಡಿ, ಇದಕ್ಕೆ ಚಾಕೋಲೇಟ್ ಫ್ಲೇವರ್ ನ ಐಸ್ಕ್ರೀಮ್ ಬೆರೆಸಿದ್ದಾರೆ. ಇದುವೆ ಚಾಕೋಲೇಟ್ ಮ್ಯಾಗಿ. ಇದನ್ನು ಕಂಡ ನೆಟ್ಟಿಗರು ದಂಗಾಗಿದ್ದಾರೆ.