ವಯಸ್ಸು 40 ಸಮೀಪಿಸುತ್ತಿದ್ದಂತೆ ಮಹಿಳೆಯರಲ್ಲೂ ಮಧುಮೇಹದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಪ್ರತಿ ಬಾರಿ ವೈದ್ಯರ ಬಳಿ ಹೋಗುವ ಬದಲು ಈ ಲಕ್ಷಣಗಳು ಕಂಡರೆ ಮಾತ್ರ ವೈದ್ಯರ ಬಳಿ ತೆರಳುವುದು ಜಾಣತನ.
ದೇಹ ತೂಕದಲ್ಲಿ ಭಾರಿ ಬದಲಾವಣೆ ಆದರೆ ಮೊದಲು ವೈದ್ಯರನ್ನು ಸಂಪರ್ಕಿಸಬೇಕು. ಇದು ಮಧು ಮೇಹದ ಮೊದಲ ಲಕ್ಷಣ.
ಆಗಾಗ ಮೂತ್ರ ವಿಸರ್ಜನೆಗೆ ತೆರಳಬೇಕು ಎನಿಸುವುದೂ ಇದರ ಲಕ್ಷಣವೇ ಇರಬಹುದು. ವಿಪರೀತ ಬಾಯಾರಿಕೆ, ಗಂಟಲು ಒಣಗಿದಂತೆ ಭಾಸವಾಗುವುದು ಇತ್ಯಾದಿ.
ಹಸಿವು ಹೆಚ್ಚಾಗಿ ನಿಶ್ಯಕ್ತಿಯಿಂದ ಬಳಲಿದ ಭಾವನೆ ವ್ಯಕ್ತವಾಗುತ್ತದೆ. ಲೈಂಗಿಕ ಚಟುವಟಿಕೆಗಳಲ್ಲಿ ಆಸಕ್ತಿ ಕಡಿಮೆಯಾಗುತ್ತದೆ. ಅಡುಗೆ ಮನೆಯಲ್ಲಾದ ಸಣ್ಣ ಗಾಯವೂ ಮಾಗದೆ ಬಹುವಾಗಿ ಕಾಡುತ್ತದೆ. ಈ ಎಲ್ಲಾ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.