ನವೆಂಬರ್ನಲ್ಲಿ ದೇಶದ ಬ್ಯಾಂಕುಗಳಿಗೆ ಹಲವು ದಿನಗಳ ಕಾಲ ರಜೆ ಇದ್ದು, ನೀವೇನಾದರೂ ಬ್ಯಾಂಕ್ ಕೆಲಸದ ಮೇಲೆ ಹೋಗುವುದಾದರೆ ಈ ರಜೆಗಳ ಪಟ್ಟಿಯನ್ನೊಮ್ಮೆ ಗಮನಿಸಿ ಹೋಗುವುದು ಸೂಕ್ತ.
ನವೆಂಬರ್ 2021ರ ಯಾವೆಲ್ಲಾ ದಿನಗಳಲ್ಲಿ ಬ್ಯಾಂಕುಗಳು ತೆಗೆದಿರುವುದಿಲ್ಲ ಎಂದು ರಿಸರ್ವ್ ಬ್ಯಾಂಕ್ ಪಟ್ಟಿ ಮಾಡಿದೆ. ಇದೇ ವೇಳೆ ಆನ್ಲೈನ್ ಬ್ಯಾಂಕಿಂಗ್ ಚಟುವಟಿಕೆಗಳು ಎಂದಿನಂತೆ ಮುಂದುವರೆಯಲಿವೆ.
ರಜಾ ದಿನಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ ಎಂಬುದನ್ನು ನಾವು ಇಲ್ಲಿ ಮನಗಾಣಬೇಕಿದೆ. ವಿವಿಧ ರಾಜ್ಯಗಳಲ್ಲಿ ಆಚರಿಸುವ ಹಬ್ಬಗಳ ಆಧಾರದಲ್ಲಿ ಬ್ಯಾಂಕಿಂಗ್ ರಜೆಗಳು ಆಯಾ ರಾಜ್ಯಗಳಲ್ಲಿ ಬದಲಾಗುತ್ತಿರುತ್ತವೆ.
ATM ನಿಂದ ಹಣ ಹಿಂಪಡೆಯುವಿಕೆಗೆ ಮತ್ತೊಂದು ಹಂತದ ಭದ್ರತಾ ವ್ಯವಸ್ಥೆ ಮಾಡಿದ ಎಸ್.ಬಿ.ಐ
ನವೆಂಬರ್ ತಿಂಗಳ ರಜೆಗಳ ಪಟ್ಟಿ ಇಂತಿದೆ:
ಕನ್ನಡ ರಾಜ್ಯೋತ್ಸವ: ನವೆಂಬರ್ 1 ಸೋಮವಾರ
ನರಕ ಚತುರ್ದಶಿ: ನವೆಂಬರ್ 3 ಬುಧವಾರ
ದೀಪಾವಳಿ (ಬಲಿ ಪ್ರತಿಪಾಡ್ಯಮಿ): ನವೆಂಬರ್ 5 ಶುಕ್ರವಾರ
ಗುರು ನಾನಕ್ ಜಯಂತಿ/ ಕಾರ್ತಿಕ ಪೂರ್ಣಿಮೆ: ನವೆಂಬರ್ 19 (ನಿರ್ಬಂಧಿತ ರಜೆ) ಶುಕ್ರವಾರ
ಕನಕದಾಸ ಜಯಂತಿ: ನವೆಂಬರ್ 22 ಸೋಮವಾರ
ಹಬ್ಬದ ʼಶೋಭೆʼ ಹೆಚ್ಚಿಸುತ್ತೆ ಬಣ್ಣದ ರಂಗೋಲಿ
ಇವುಗಳ ಜೊತೆಗೆ, ಎರಡನೇ ಹಾಗೂ ನಾಲ್ಕನೇ ಶನಿವಾರಗಳು, ಭಾನುವಾರಗಳು ಸಹ ಸೇರಿಕೊಂಡಿವೆ.
ನವೆಂಬರ್ 7 – ಭಾನುವಾರ
ನವೆಂಬರ್ 13 – ತಿಂಗಳ ಎರಡನೇ ಶನಿವಾರ
ನವೆಂಬರ್ 14 – ಭಾನುವಾರ
ನವೆಂಬರ್ 21 – ಭಾನುವಾರ
ನವೆಂಬರ್ 27 – ತಿಂಗಳ ನಾಲ್ಕನೇ ಶನಿವಾರ
ನವೆಂಬರ್ 28 – ಭಾನುವಾರ