ನಂದಿ ಬೆಟ್ಟದಲ್ಲಿ ರೋಪ್ ವೇ ನಿರ್ಮಾಣ ಮಾಡಬೇಕೆಂಬ ಪ್ರವಾಸಿಗರ ದಶಕಗಳ ಕನಸು ಈಗ ನನಸಾಗುತ್ತಿದೆ. ಸೋಮವಾರದಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇದರ ಭೂಮಿ ಪೂಜೆ ನೆರವೇರಿಸಿದ್ದು, ನಿರ್ಮಾಣ ಕಾರ್ಯ ಆರಂಭವಾಗಲಿದೆ.
93.40 ಕೋಟಿ ರೂಪಾಯಿ ವೆಚ್ಚದಲ್ಲಿ ರೋಪ್ ವೇ ನಿರ್ಮಾಣ ಕಾರ್ಯ ನಡೆಯಲಿದ್ದು, 2.93 ಕಿಲೋ ಮೀಟರ್ ದೂರವನ್ನು ಕ್ರಮಿಸಲಿದೆ. ಈ ರೋಪ್ ವೇನಲ್ಲಿ 50 ಕ್ಯಾಬಿನ್ ಗಳು ಇರುತ್ತವೆ ಎಂದು ಹೇಳಲಾಗಿದೆ.
ಪ್ರತಿ ಕ್ಯಾಬಿನ್ ನಲ್ಲಿ 10 ಪ್ರಯಾಣಿಕರು ಪ್ರಯಾಣಿಸಬಹುದಾಗಿದ್ದು, ಕ್ರಮಿಸಲು ಹದಿನೈದು ನಿಮಿಷಗಳನ್ನು ತೆಗೆದುಕೊಳ್ಳಲಿದೆ. ಗಂಟೆಗೆ 1000 ಮಂದಿ ಪ್ರಯಾಣಿಸಲಿದ್ದು, ಇದರ ನಿರ್ಮಾಣದಿಂದ 500 ಮಂದಿಗೆ ನೇರವಾಗಿ ಉದ್ಯೋಗ ದೊರೆಯುತ್ತದೆ ಎಂಬ ನಿರೀಕ್ಷೆ ಹೊಂದಲಾಗಿದೆ.