ಇಬ್ಬರು ಪ್ರೇಮಿಗಳು ತರಗತಿಯಲ್ಲಿ ಚುಂಬಿಸುತ್ತಿರುವ ಉಲ್ಲಾಸದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಂನ ಮೆಮೆ ಪುಟದಿಂದ ಹಂಚಿಕೊಳ್ಳಲಾಗಿದೆ. ಸಾವಿರಾರು ವೀಕ್ಷಣೆಗಳೊಂದಿಗೆ ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ನಗುವ ಎಮೋಜಿಗಳೊಂದಿಗೆ ಕಾಮೆಂಟ್ ವಿಭಾಗವನ್ನು ತುಂಬುತ್ತಿದ್ದಾರೆ. ಆದರೆ, ಎಲ್ಲರೂ ಯಾಕೆ ನಗುತ್ತಿದ್ದಾರೆ ಎಂದು ತಿಳಿಯಲು ನೀವು ವಿಡಿಯೋವನ್ನು ಕೊನೆಯವರೆಗೂ ನೋಡಬೇಕು..
ಕಾಲೇಜೊಂದರ ತರಗತಿಯಲ್ಲಿ ವಿದ್ಯಾರ್ಥಿಗಳು ತಮ್ಮ ಪಾಡಿಗೆ ತಾವಿದ್ದರೆ, ಹಿಂಭಾಗದಲ್ಲಿ ಕುಳಿತ ಯುವಕ ಮತ್ತು ಯುವತಿಯನ್ನು ತೋರಿಸುವುದರೊಂದಿಗೆ ವಿಡಿಯೋ ಪ್ರಾರಂಭವಾಗುತ್ತದೆ. ಯುವಕನು ತನ್ನ ಗೆಳತಿಯ ಭುಜಕ್ಕೆ ಕೈ ಹಾಕಿ ಕುಳಿತಿದ್ದಾನೆ. ನಂತರ ಅವಳ ತಲೆಗೂದಲನ್ನು ಸರಿಸಿ ಮುಖಕ್ಕೆ ಮುತ್ತಿಕ್ಕಿದ್ದಾನೆ.
ಯುವಕ, ಆಕೆಯ ಕೆನ್ನೆಗೆ ಚುಂಬಿಸಿದ ನಂತರ, ಹಿಂದಿನಿಂದ ಅವರನ್ನು ರೆಕಾರ್ಡ್ ಮಾಡುತ್ತಿದ್ದ ಕ್ಯಾಮರಾ ಅವರ ಮುಖಗಳನ್ನು ತೋರಿಸಲು ಮುಂದೆ ಚಲಿಸಿದೆ. ಇಲ್ಲೇ ಇರುವುದು ಟ್ವಿಸ್ಟ್. ಗೆಳತಿಯನ್ನು ನೋಡಿದ್ರೆ ನೀವು ಶಾಕ್ ಆಗೋದು ಪಕ್ಕಾ. ಯಾಕೆಂದರೆ, ಅಲ್ಲಿ ಕುಳಿತಿದ್ದಿದ್ದು ಯುವತಿಯಲ್ಲ, ಯುವಕ..! ಹುಡುಗಿಯರಂತೆ ಕೇಶವಿನ್ಯಾಸ ಹೊಂದಿರೋ ಕಾರಣದಿಂದಾಗಿ ಹಿಂದಿನಿಂದ ನೋಡಿದ್ರೆ ಆತ ಯುವತಿಯಂತೆ ತೋರುತ್ತಿದ್ದ.
ವಿಡಿಯೋದಲ್ಲಿ ಮೂವರು ಗೆಳೆಯರು ಹತ್ತಿರ ಕುಳಿತು ನಗುವುದನ್ನು ನೋಡಬಹುದು. ವಿಭಿನ್ನ ಕೋನದಿಂದ ಮತ್ತು ವಿಡಿಯೋ ಕಟ್ ಮಾಡಿರುವ ಕಾರಣದಿಂದಾಗಿ ನೆಟ್ಟಿಗರು ಇದು ಕೇವಲ ಇಬ್ಬರು ಪ್ರೇಮಿಗಳೊಂದಿಗೆ ಫ್ಲರ್ಟಿಂಗ್ ಅಂತಾನೇ ಭಾವಿಸಿದ್ದರು. ಆದರೆ, ಅಸಲಿ ವಿಚಾರ ಗೊತ್ತಾದಾಗ ನಗು ತಡೆಯಲಾಗಲಿಲ್ಲ.