
ಕೇವಲ ಸಾಂಬಾರ್, ಪಲ್ಯ ಅಷ್ಟೇ ಅಲ್ಲದೆ ತೆಂಗಿನಕಾಯಿ ಉಪಯೋಗಿಸಿ ವಡೆಯನ್ನು ಕೂಡ ತಯಾರಿಸಬಹುದು. ಅದನ್ನು ತಯಾರಿಸುವ ವಿವರ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು
ತೆಂಗಿನ ಕಾಯಿ ತುರಿ 2 ಕಪ್
ಚಿರೋಟಿ ರವೆ 1 ಕಪ್
ಮೈದಾ ಹಿಟ್ಟು 2 ಕಪ್
ಸಕ್ಕರೆ ಪುಡಿ 1 ಕಪ್
ಏಲಕ್ಕಿ ಪುಡಿ 1/4 ಚಮಚ
ಜಾಕಾಯಿ ಪುಡಿ 1/4 ಚಮಚ
ಎಣ್ಣೆ ಕರೆಯಲು.
ಮಾಡುವ ವಿಧಾನ
ತೆಂಗಿನಕಾಯಿ ತುರಿಗೆ ಚಿರೋಟಿ ರವೆ, ಮೈದಾ ಹಿಟ್ಟು, ಸಕ್ಕರೆ ಪುಡಿ, ಏಲಕ್ಕಿ ಪುಡಿ, ಜಾಕಾಯಿ ಪುಡಿ ಎಲ್ಲವನ್ನು ಸೇರಿಸಿ ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ಕಲಸಿಕೊಳ್ಳಬೇಕು. ಕಲಸಿದ ಮಿಶ್ರಣವನ್ನು 20 ನಿಮಿಷಗಳ ಕಾಲ ನೆನೆಯಲು ಬಿಡಬೇಕು.
ನಂತರ ಕಾದ ಎಣ್ಣೆಗೆ ಕಲಸಿದ ಮಿಶ್ರಣದಿಂದ ಚಿಕ್ಕ-ಚಿಕ್ಕ ಉಂಡೆಗಳನ್ನು ಮಾಡಿ ವಡೆಯ ಆಕಾರದಲ್ಲಿ ತಟ್ಟಿ ಎಣ್ಣೆಯಲ್ಲಿ ಕರಿಯಬೇಕು. ಈಗ ತೆಂಗಿನ ಕಾಯಿ ಸಿಹಿ ವಡೆ ರೆಡಿ ಟು ಈಟ್.