ನಿನ್ನೆ ನಡೆದ ಟಿ ಟ್ವೆಂಟಿ ವಿಶ್ವಕಪ್ 2022 ನಲ್ಲಿ ಪಾಕಿಸ್ತಾನದ ವಿರುದ್ಧ ಇಂಗ್ಲೆಂಡ್ ತಂಡ ರೋಚಕ ಜಯ ಸಾಧಿಸುವ ಮೂಲಕ ಟ್ರೋಫಿ ಎತ್ತಿ ಹಿಡಿದಿದೆ.
ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ನಲ್ಲಿ ಬೌಲರ್ ಗಳ ಪಾತ್ರ ಅತಿ ಮುಖ್ಯವಾಗಿದೆ. ಟಿ ಟ್ವೆಂಟಿ ವಿಶ್ವಕಪ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಗಳ ಪಟ್ಟಿ ಇಂತಿದೆ.
ಶ್ರೀಲಂಕಾ ಆಲ್ರೌಂಡರ್ ವಹಿಂದು ಹಸರಂಗ 8 ಪಂದ್ಯಗಳಲ್ಲಿ 15 ವಿಕೆಟ್ ಕಬಳಿಸಿದರೆ, ಸ್ಯಾಮ್ ಕರನ್ 6 ಪಂದ್ಯಗಳನ್ನಾಡಿದ್ದು, 13 ವಿಕೆಟ್ ತೆಗೆದಿದ್ದಾರೆ.
ನೆದರ್ಲೆಂಡ್ ನ ಬಸ್ ಡೇ ಲೀಡ್ 8 ಪಂದ್ಯಗಳಲ್ಲಿ 13 ವಿಕೆಟ್ ಪಡೆದುಕೊಂಡಿದ್ದು, ಇನ್ನೂ ಜಿಂಬಾಬ್ವೆ ತಂಡದ ಮುಜರಬಾನಿ 12 ವಿಕೆಟ್ ಹಾಗೂ ಅನ್ರಿಚ್ ನಾರ್ಟ್ಜೆ ಗೆ 11 ವಿಕೆಟ್ ಸಿಕ್ಕಿದೆ. ಟಿ ಟ್ವೆಂಟಿ ವಿಶ್ವಕಪ್ ನ ಟಾಪ್ 5ಬೌಲರ್ ಗಳು ಇವರಾಗಿದ್ದಾರೆ.