ಜಾಯಿಕಾಯಿಯನ್ನು ನೀವು ಪಲಾವ್, ಬಿರಿಯಾನಿ ಅಥವಾ ಇನ್ನಾವುದೋ ಉತ್ತರ ಭಾರತೀಯ ಶೈಲಿಯ ಆಹಾರಗಳನ್ನು ತಯಾರಿಸುವಾಗ ಬಳಸುತ್ತೀರಾ. ಇದರ ನಿಜವಾದ ಆರೋಗ್ಯದ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತೇ…?
ಸಂಶೋಧನೆಯೊಂದರ ಪ್ರಕಾರ ಮಹಿಳೆಯರು ಇದನ್ನು ನಿತ್ಯ ಸೇವಿಸಬೇಕು. ಆಯುರ್ವೇದದಲ್ಲಿ ಮಹತ್ವದ ಸ್ಥಾನ ಪಡೆದಿರುವ ಇದನ್ನು ನಿದ್ರಾಕಾರಕ ಔಷಧಿಯಾಗಿಯೂ ಬಳಸಲಾಗುತ್ತದೆ.
ಇದನ್ನು ನಿತ್ಯ ಒಂದು ಸಣ್ಣ ಚಿಟಿಕೆಯಷ್ಟು ಸೇವಿಸುವುದರಿಂದ ಹಾರ್ಮೋನಿನ ಅಸಮತೋಲನ ಕಡಿಮೆಯಾಗುತ್ತದೆ. ಮಹಿಳೆಯರ ಈಸ್ಟ್ರೋಜೆನ್ ಹಾರ್ಮೋನ್ ಹೆಚ್ಚಿ ಸಂತಾನೋತ್ಪತ್ತಿಗೆ ನೆರವಾಗುತ್ತದೆ.
ಇನ್ನು ಗಂಟು ನೋವು ಸಮಸ್ಯೆಯಿಂದ ಬಳಲುವವರು ಇದನ್ನು ಸೇವಿಸುವುದರಿಂದ ಸಾಕಷ್ಟು ಪ್ರಯೋಜನವಿದೆ. ಚಿಕ್ಕ ಮಕ್ಕಳಿಗೆ ಬಜೆ ಬೇರಿನೊಂದಿಗೆ ಇದನ್ನು ಕೂಡ ತೇದಿ ಕೊಡಬಹುದು.
ಅತಿಯಾದ ತೂಕದಿಂದ ಬಳಲುತ್ತಿರುವವರು ಬೆಳಿಗ್ಗೆ ಉಗುರು ಬೆಚ್ಚಗಿನ ನೀರಿಗೆ ಚಿಟಿಕೆ ಇದರ ಪುಡಿಯನ್ನು ಸೇರಿಸಿ ಕುಡಿಯುವುದರಿಂದ ತೂಕ ಇಳಿಯುತ್ತದೆ. ಹಾಗೇ ಕೊಲೆಸ್ಟ್ರಾಲ್ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ.