ಬೇಕಾಗುವ ಸಾಮಗ್ರಿಗಳು : ಕಡಲೆಹಿಟ್ಟು- 1 ಕಪ್, ಗೋಡಂಬಿ- 1 ಕಪ್, ತುಪ್ಪ- 1 ಕಪ್ ಸಕ್ಕರೆ- 2 ಕಪ್.
ತಯಾರಿಸುವ ವಿಧಾನ : ಒಲೆಯ ಮೇಲೆ ಬಾಣಲೆ ಇಟ್ಟು 1 ಚಮಚ ತುಪ್ಪ ಹಾಕಿ, ಬಿಸಿಯಾದಾಗ ಕಡಲೆ ಹಿಟ್ಟು ಹಾಕಿ, ಹಸಿ ವಾಸನೆ ಹೋಗುವವರೆಗೂ ಹುರಿದು ಕೆಳಗಿಳಿಸಿ. ಗೋಡಂಬಿ ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಿ. ಈಗ ಬಾಣಲೆಗೆ ಸಕ್ಕರೆ, 1/2 ಕಪ್ ನೀರು ಹಾಕಿ ಒಂದೆಳೆ ಪಾಕ ಬರುವವರೆಗೂ ಕುದಿಸಿ ಹುರಿದ ಕಡಲೆ ಹಿಟ್ಟು ಪಾಕಕ್ಕೆ ಹಾಕಿ, ಗೋಡಂಬಿ ಪುಡಿ ಹಾಕಿ ತಿರುಗಿಸಿ. ಆಗಾಗ ತುಪ್ಪ ಹಾಕಿ ತಿರುಗಿಸುತ್ತಾ ಇರಿ. ಪಾಕ, ಕಡಲೆ ಹಿಟ್ಟು ಚೆನ್ನಾಗಿ ಮಿಶ್ರಣವಾಗಿ ಪಾತ್ರೆಗೆ ಅಂಟದಂತೆ ಮುದ್ದೆಯಾಗುವವರೆಗೂ ಚೆನ್ನಾಗಿ ಗೊಟಾಯಿಸಿ ಹದಕ್ಕೆ ಬೇಯಿಸಿ.
ಈಗ ಒಂದು ತಟ್ಟೆಗೆ ತುಪ್ಪ ಸವರಿ ಮಿಶ್ರಣವನ್ನು ತಟ್ಟೆಗೆ ಹಾಕಿ ತಟ್ಟಿ. ತಣ್ಣಗಾದ ಮೇಲೆ ತುಂಡು ಮಾಡಿ. ಈಗ ಸವಿಯಾದ ಗೋಡಂಬಿ ಮೈಸೂರು ಪಾಕ್ ಸವಿಯಲು ಸಿದ್ಧ.