ಕೆಲಸ ಮಾಡುವಾಗ, ಮಕ್ಕಳು ಆಟ ಆಡುವಾಗ ಗಾಯವಾಗೋದು ಸಾಮಾನ್ಯ. ಬಿದ್ದು ಗಾಯವಾಗುತ್ತೆ. ಸುಟ್ಟು ಗಾಯವಾಗುತ್ತೆ.
ಚಾಕುವಿನಿಂದ ಗಾಯವಾಗುತ್ತೆ. ಇದಕ್ಕೆಲ್ಲ ಉತ್ತಮ ಮದ್ದು ಸಕ್ಕರೆ. ಹೌದು ನಿಮ್ಮ ಅಡುಗೆ ಮನೆಯಲ್ಲಿರುವ ಸಕ್ಕರೆ ಸಹಾಯದಿಂದ ಸುಲಭವಾಗಿ ಗಾಯವನ್ನು ಗುಣಪಡಿಸಿಕೊಳ್ಳಬಹುದು. ಬಹು ಬೇಗ ಗಾಯವನ್ನು ಗುಣಪಡಿಸುವ ಶಕ್ತಿ ಸಕ್ಕರೆಗಿದೆ.
ಮೊದಲು ಗಾಯವನ್ನು ಸ್ವಚ್ಛಗೊಳಿಸಿ. ಬೆಚ್ಚಗಿರುವ ನೀರಿನಿಂದ ಗಾಯವನ್ನು ತೊಳೆಯಿರಿ. ಗಾಯದಲ್ಲಿ ನೀರಿನ ಅಂಶವಿರದಂತೆ ನೋಡಿಕೊಳ್ಳಿ. ದೊಡ್ಡ ಪ್ರಮಾಣದಲ್ಲಿ ಗಾಯವಾಗಿದ್ದರೆ ಮೊದಲು ಗಾಯಕ್ಕೆ ಜೇನು ತುಪ್ಪವನ್ನು ಹಾಕಿ. ನಂತ್ರ ಸಕ್ಕರೆಯನ್ನು ಹಾಕಿ.
ಗಾಯಕ್ಕೆ ಸಕ್ಕರೆ ಹಾಕಿದ ನಂತ್ರ ಬ್ಯಾಂಡೇಜ್ ಮಾಡಿ. ಬ್ಯಾಂಡೇಜ್ ಒಳಗೆ ಕೊಳಕು ಹೋಗದಂತೆ ನೋಡಿಕೊಳ್ಳಿ. ಬ್ಯಾಂಡೇಜ್ ಗಾಯ ಕೊಳಕಾಗದಂತೆ ಹಾಗೂ ಬ್ಯಾಕ್ಟೀರಿಯಾ ಬರದಂತೆ ತಡೆಯುತ್ತದೆ. ಪ್ರತಿದಿನ ಬ್ಯಾಂಡೇಜ್ ಬದಲಾಯಿಸಿ. ಹಾಗೆ ಸಕ್ಕರೆಯನ್ನು ಸ್ವಚ್ಛಗೊಳಿಸಿ ಹೊಸ ಸಕ್ಕರೆಯನ್ನು ಹಾಕಿ.
ರಕ್ತಸ್ರಾವವಾಗುತ್ತಿದ್ದರೆ ಸಕ್ಕರೆಯನ್ನು ಹಾಕಬೇಡಿ. ರಕ್ತ ಸೋರುತ್ತಿರುವ ಗಾಯದ ಮೇಲೆ ಸಕ್ಕರೆ ಹಾಕಿದ್ರೆ ರಕ್ತಸ್ರಾವ ಜಾಸ್ತಿಯಾಗುತ್ತದೆ.