ಬೆಳಿಗ್ಗಿನ ತಿಂಡಿಗೆ ಏನು ಮಾಡುವುದು ಎಂಬ ಚಿಂತೆಯಲ್ಲಿದ್ದೀರಾ..? ಸುಲಭವಾಗಿ ಮಸಾಲೆ ದೋಸೆ ಮಾಡುವ ವಿಧಾನ ಇಲ್ಲಿದೆ ನೋಡಿ. ಕಡಿಮೆ ಸಾಮಾನಿನಲ್ಲಿ ರುಚಿಕರವಾದ ಮಸಾಲೆ ದೋಸೆ ಮಾಡಿಕೊಂಡು ಸವಿಯಿರಿ.
ಬೇಕಾಗುವ ಸಾಮಾಗ್ರಿಗಳು:
3 ಕಪ್ ದೋಸೆ ಅಕ್ಕಿ, ½ ಕಪ್- ಉದ್ದಿನಬೇಳೆ, ½ ಕಪ್ – ಕಡಲೆಬೇಳೆ, 2 ಚಮಚ ಮೆಂತೆ, ಉಪ್ಪು ರುಚಿಗೆ ತಕ್ಕಷ್ಟು. ಸ್ವಲ್ಪ ತುಪ್ಪ.
ಮಾಡುವ ವಿಧಾನ:
ಅಕ್ಕಿ, ಉದ್ದಿನಬೇಳೆ, ಕಡಲೆಬೇಳೆ, ಮೆಂತೆಯನ್ನು 2 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ನಂತರ ಒಂದು ಮಿಕ್ಸಿ ಜಾರಿಗೆ ಮೆಂತೆ, ಕಡಲೆಬೇಳೆ, ಉದ್ದಿನಬೇಳೆಯನ್ನು ಹಾಕಿ ನಯವಾಗಿ ರುಬ್ಬಿಕೊಳ್ಳಿ. ಇದನ್ನು ಒಂದು ಪಾತ್ರೆಗೆ ತೆಗೆದುಕೊಳ್ಳಿ. ನಂತರ ಅಕ್ಕಿಯನ್ನು ಹಾಕಿ ರುಬ್ಬಿಕೊಳ್ಳಿ ಎರಡು ಹಿಟ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಸ್ವಲ್ಪ ಉಪ್ಪು ಸೇರಿಸಿ ಚೆನ್ನಾಗಿ ಕೈಯಾಡಿಸಿ. ರಾತ್ರಿಯಿಡೀ ಈ ಹಿಟ್ಟನ್ನು ಹಾಗೇ ಬಿಡಿ. ನಂತರ ಬೆಳಿಗ್ಗೆ ದೋಸೆ ಕಾವಲಿಯನ್ನು ಗ್ಯಾಸ್ ಮೇಲೆ ಇಟ್ಟು ಅದಕ್ಕೆ ಸ್ವಲ್ಪ ನೀರು ಸಿಂಪಡಿಸಿ. ನಂತರ ತೆಳುವಾಗಿ ದೋಸೆ ಮಾಡಿಕೊಳ್ಳಿ. ಆಲೂಗಡ್ಡೆ ಪಲ್ಯ ಮಧ್ಯ ಹಾಕಿ ಚೆನ್ನಾಗಿ ಬೇಯಿಸಿಕೊಂಡರೆ ರುಚಿಕರವಾದ ಮಸಾಲೆ ದೋಸೆ ಸವಿಯಲು ಸಿದ್ಧ.