ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ನಾಯಕರು ಅಭ್ಯರ್ಥಿಗಳ ಆಯ್ಕೆಯಲ್ಲಿ ಬ್ಯುಸಿಯಾಗಿದ್ದಾರೆ. ನಾಮಪತ್ರ ಸಲ್ಲಿಕೆ ಇನ್ನಷ್ಟೇ ಆರಂಭವಾಗಬೇಕಿದ್ದು, ಆ ಸಂದರ್ಭದಲ್ಲಿ ಅಭ್ಯರ್ಥಿಗಳು ತಮ್ಮ ವಿರುದ್ಧ ಇರುವ ಕ್ರಿಮಿನಲ್ ಪ್ರಕರಣಗಳ ವಿವರ ಘೋಷಿಸಿಕೊಳ್ಳಬೇಕಾಗುತ್ತದೆ.
ಇದರ ಮಧ್ಯೆ 2018ರ ವಿಧಾನಸಭಾ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿದ್ದ ಎಷ್ಟು ಅಭ್ಯರ್ಥಿಗಳು ತಮ್ಮ ವಿರುದ್ಧ ಇರುವ ಕ್ರಿಮಿನಲ್ ಪ್ರಕರಣಗಳ ಕುರಿತು ಘೋಷಿಸಿಕೊಂಡಿದ್ದರು ಎಂಬ ಮಾಹಿತಿಯನ್ನು ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ ತನ್ನ ವರದಿಯಲ್ಲಿ ಬಹಿರಂಗಪಡಿಸಿದೆ.
ಇದರ ಅನುಸಾರ ರಾಜ್ಯದ 219 ಹಾಲಿ ಶಾಸಕರ ಪೈಕಿ, 32 ಶಾಸಕರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ಇವೆ. ಈ ಪೈಕಿ ಬಿಜೆಪಿಯ ಅತಿ ಹೆಚ್ಚು ಅಂದರೆ 22 ಶಾಸಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದರೆ, ಕಾಂಗ್ರೆಸ್ ಐದು, ಜೆಡಿಎಸ್ ನಾಲ್ಕು ಹಾಗೂ ಓರ್ವ ಪಕ್ಷೇತರ ಶಾಸಕರ ವಿರುದ್ಧ ಕ್ರಿಮಿನಲ್ ಪ್ರಕರಣ ಇದೆ.
ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ ಶಾಸಕರಗಳ ಹೆಸರು ಇಂತಿದೆ.
ಬಿಜೆಪಿ
ಸೋಮಶೇಖರ ರೆಡ್ಡಿ
ಬಿ. ಶ್ರೀರಾಮುಲು
ಎಂ.ಪಿ. ರೇಣುಕಾಚಾರ್ಯ
ಅಭಯ್ ಕುಮಾರ್ ಪಾಟೀಲ್
ವೀರಭದ್ರಯ್ಯ (ವೀರಣ್ಣ) ಚರಂತಿಮಠ
ಬಸನಗೌಡ ಪಾಟೀಲ್ ಯತ್ನಾಳ್
ಬಸವರಾಜ ದುರ್ಗಪ್ಪ ದಡೆಸುಗೂರ
ಪರಣ್ಣ ಮುನವಳ್ಳಿ
ಮಾಡಾಳ್ ವಿರೂಪಾಕ್ಷಪ್ಪ
ಸಿ.ಟಿ. ರವಿ
ಎಸ್.ಎ. ರಾಮದಾಸ್
ದೊಡ್ಡನಗೌಡ ಜಿ ಪಾಟೀಲ
ರಾಜಕುಮಾರ್
ಹರೀಶ್ ಪೂಂಜಾ
ಸಂಜೀವ ಮಠಂದೂರು
ಎನ್. ಮಹೇಶ್
ಜೆ.ಸಿ. ಮಾಧುಸ್ವಾಮಿ
ನೆಹರು ಓಲೇಕರ್
ದಿನಕರ ಕೇಶವ ಶೆಟ್ಟಿ
ಕೆ.ಸಿ. ನಾರಾಯಣಗೌಡ
ಅರುಣ ಕುಮಾರ್ ಗುತ್ತೂರು
ಶರಣು ಸಲಗರ
ಕಾಂಗ್ರೆಸ್
ರಂಗನಾಥ ಎಚ್.ಡಿ.
ವೈ.ಜಿ. ಪಾಟೀಲ
ಕೆ.ವೈ. ನಂಜೇಗೌಡ
ಬಿ.ಕೆ. ಸಂಗಮೇಶ್ವರ
ಭೀಮ ನಾಯ್ಕ್
ಜೆಡಿಎಸ್
ಡಿ.ಸಿ. ತಮ್ಮಣ್ಣ
ಕೆ. ಅನ್ನ ದಾನಿ
ಎಂ. ಶ್ರೀನಿವಾಸ
ನಾಗನಗೌಡ
ಪಕ್ಷೇತರ
ಶರತ್ ಬಚ್ಚೇಗೌಡ