ಬೆಳಿಗ್ಗೆಯಾದರೆ ಸಾಕು ಏನು ತಿಂಡಿ ಮಾಡಬೇಕೆಂಬುದು ಹೆಚ್ಚಿನ ಗೃಹಿಣಿಯರ ಯೋಚನೆಯಾಗಿರುತ್ತದೆ. ಒಂದೇ ರುಚಿಯ ಉಪಾಹಾರ ಸೇವಿಸಿ ನಾಲಿಗೆ ಜಡ್ಡು ಹಿಡಿದಿದ್ದರೆ, ಇಲ್ಲಿದೆ ನೋಡಿ ಕ್ಯಾರೆಟ್ ಪೊಂಗಲ್ ಮಾಡುವ ವಿಧಾನ.
ಬೇಕಾಗುವ ಪದಾರ್ಥಗಳು:
250 ಗ್ರಾಂ ಅಕ್ಕಿ, 100 ಗ್ರಾಂ ತೊಗರಿಬೇಳೆ, 400 ಗ್ರಾಂ ಕ್ಯಾರೆಟ್, 100 ಗ್ರಾಂ ಹಸಿ ಬಟಾಣಿ ಕಾಳು, ಅರ್ಧ ತೆಂಗಿನಕಾಯಿ, ಸ್ವಲ್ಪ ಕೊತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, 10 ಗ್ರಾಂ ಗೋಡಂಬಿ, ಸ್ವಲ್ಪ ಎಣ್ಣೆ, 1 ಚಮಚ ಸಾಸಿವೆ, 1 ಚೂರು ಶುಂಠಿ, 4 ಹಸಿ ಮೆಣಸಿನ ಕಾಯಿ.
ಬೆನ್ನು ನೋವು ನಿವಾರಿಸುವ ಪೋಷಕಾಂಶಭರಿತ ಆಹಾರ
ತಯಾರಿಸುವ ವಿಧಾನ:
ತೆಂಗಿನ ಕಾಯಿಯನ್ನು ತುರಿದುಕೊಂಡು, ಅದಕ್ಕೆ ಶುಂಠಿ, ಮೆಣಸಿನ ಕಾಯಿ ಹಾಕಿಕೊಂಡು ಒರಳಿನಲ್ಲಿ ರುಬ್ಬಿಕೊಳ್ಳಿ, ಒಂದು ಅಗಲವಾದ ಪಾತ್ರೆಗೆ ಎಣ್ಣೆ ಹಾಕಿ ಒಲೆಯ ಮೇಲಿಡಿ.
ಎಣ್ಣೆ ಕಾದ ಬಳಿಕ ಸಾಸಿವೆ ಹಾಕಿ ಒಗ್ಗರಣೆ ಕೊಡಿ, ಇದಕ್ಕೆ ಹಸಿ ಬಟಾಣಿ ಕಾಳು, ಸಣ್ಣಗೆ ಹೆಚ್ಚಿಕೊಂಡ ಕ್ಯಾರೆಟ್, ತೊಗರಿಬೇಳೆ ಒರಳಿನಲ್ಲಿ ರುಬ್ಬಿದ ಮಿಶ್ರಣ ಸೇರಿಸಿ ಚೆನ್ನಾಗಿ ಬೇಯಿಸಿದ ಮೇಲೆ ಉಪ್ಪು, 1 ಚಿಟಿಕೆ ಅರಿಶಿಣ ಹಾಕಿರಿ. ರೆಡಿಯಾದ ಅನ್ನವನ್ನು ಸುರಿದು, ಹೆಚ್ಚಿದ ಕೊತಂಬರಿ ಸೊಪ್ಪು, ಹಾಕಿ ಮುಚ್ಚಿಡಿ.
ಎಲ್ಲಾ ಸೇರಿಸಿ ಚೆನ್ನಾಗಿ ಮಿಶ್ರಣವಾಗುವಂತೆ ಕೆದಕಿದ ಮೇಲೆ ತುಪ್ಪದಲ್ಲಿ ಕರಿದ ಗೋಡಂಬಿಯನ್ನು ಹಾಕಿ ಹರಡಿ. ಕ್ಯಾರೆಟ್ ಪೊಂಗಲ್ ಸಿದ್ಧವಾಗುತ್ತದೆ.