ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿ ರೈತರಿಗೆ ಕೇಂದ್ರದಿಂದ 6 ಸಾವಿರ ಹಾಗೂ ರಾಜ್ಯದಿಂದ 4 ಸಾವಿರ ರೂಪಾಯಿಗಳನ್ನು ನೀಡಲಾಗುತ್ತಿದೆ. ಇದನ್ನು ಪಡೆಯುತ್ತಿರುವ ರೈತರಿಗೆ ಬಹುಮುಖ್ಯವಾದ ಮಾಹಿತಿಯೊಂದು ಇಲ್ಲಿದೆ.
ಈ ಹಣವನ್ನು ಪಡೆಯಲು ಇ-ಕೆವೈಸಿ ಮಾಡುವುದು ಕಡ್ಡಾಯವಾಗಿದ್ದು, ಆದರೆ ರಾಜ್ಯದಲ್ಲಿ ಕೇವಲ ಶೇಕಡ 16ರಷ್ಟು ರೈತರು ಮಾತ್ರ ಈವರೆಗೆ ಇ-ಕೆವೈಸಿ ಮಾಡಿಸಿದ್ದಾರೆ ಎನ್ನಲಾಗಿದೆ.
ಹೀಗಾಗಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಹಣ ಪಡೆಯುತ್ತಿರುವ ರೈತರು ನಿಗದಿತ ದಿನಾಂಕದೊಳಗೆ ಇ-ಕೆವೈಸಿ ಮಾಡಿಸದಿದ್ದರೆ ಅಂತವರಿಗೆ ಹಣ ನೀಡಲಾಗುವುದಿಲ್ಲ ಎಂದು ಕೃಷಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.