ಕಾಂಡೋಮ್ ಅನ್ನೋದು ಲೈಂಗಿಕ ಆರೋಗ್ಯಕ್ಕೆ ಬಹಳವೇ ಮುಖ್ಯ. ಸುರಕ್ಷಿತ ಲೈಂಗಿಕತೆ ಹಾಗೂ ಸಂತಾನ ತಡೆಗಟ್ಟಲು ಉಪಯೋಗಕಾರಿಯಾಗುವ ಈ ಕಾಂಡೋಮ್ ಬಗ್ಗೆ ಕುತೂಹಲಕಾರಿ ಅಂಶಗಳು ಬಹಳಷ್ಟಿದೆ.
ಕ್ರಿಸ್ತಪೂರ್ವ ಕಾಲದಲ್ಲೇ ಕಾಂಡೋಮ್ ಬಳಸುತ್ತಿದ್ದರು ಎನ್ನುವುದಕ್ಕೆ ಪುರಾವೆಗಳು ದೊರೆತಿವೆ. ಗುಹೆಯ ವರ್ಣಚಿತ್ರಗಳಲ್ಲಿ ಇದನ್ನು ಕಾಣಬಹುದು. ಆದರೆ ಅದನ್ನು ಹೇಗೆ ತಯಾರಿಸುತ್ತಿದ್ದರು ಎನ್ನುವುದು ತಿಳಿದುಬಂದಿಲ್ಲ.
1400 ದಶಕದಲ್ಲೇ ಏಷ್ಯಾದ ಶ್ರೀಮಂತ ವರ್ಗ ಕಾಂಡೋಮ್ ಬಳಸುತ್ತಿದ್ದರು. ಪ್ರಾಣಿಗಳ ಕೊಂಬು, ಆಮೆಯ ಚಿಪ್ಪುಗಳಿಂದಲೂ ಇದನ್ನು ತಯಾರಿಸುತ್ತಿದ್ದರು.
1400 ರಿಂದ 1700 ದಶಕದವರೆಗೆ ಲಿನಿನ್ ಕಾಂಡೋಮ್ ಗಳು ಬಂದವು. ಇವುಗಳನ್ನು ಲಿನಿನ್ ಅಥವಾ ಮೇಕೆ ಕರುಳಿನಿಂದ ತಯಾರಿಸಲಾಗುತ್ತಿತ್ತು.
ಲೆಜೆಂಡರಿ ಲವರ್ ಅಂತಲೇ ಪ್ರಸಿದ್ಧವಾದ ಕ್ಯಾಸನೋವಾ ವೈಯಕ್ತಿಕವಾಗಿಯೇ ಕಾಂಡೋಮ್ ಗಳ ಗುಣಮಟ್ಟ ಪರೀಕ್ಷೆ ಮಾಡಿದ್ದ.
ಮೊದಲ ರಬ್ಬರ್ ಕಾಂಡೋಮ್ ಬೈಸಿಕಲ್ ಒಳಗಿನ ಟ್ಯೂಬ್ ನಷ್ಟು ದಪ್ಪವಾಗಿತ್ತು.
1897 ರಲ್ಲಿ ಕಾಂಡೋಮ್ ತಯಾರಕರು ರಾಣಿ ವಿಕ್ಟೋರಿಯಾ ಭಾವಚಿತ್ರವನ್ನು ಲೇಬಲ್ ಗಳ ಮೇಲೆ ಮುದ್ರಿಸಿದ್ದರು.
1918 ರಲ್ಲಿ ಅಮೆರಿಕದಲ್ಲಿ ಕಾಂಡೋಮ್ ಮೊದಲ ಬಾರಿಗೆ ಸಾರ್ವಜನಿಕವಾಗಿ ಹಾಗೂ ಕಾನೂನಾತ್ಮಕವಾಗಿ ಮಾರಲ್ಪಟ್ಟಿತು.
1957 ರಲ್ಲಿ ಮೊದಲ ನಯವಾದ ಕಾಂಡೋಮ್ ಇಂಗ್ಲೆಂಡ್ ನಲ್ಲಿ ಪರಿಚಯಿಸಲಾಯಿತು.
ಜಗತ್ತಿನಲ್ಲಿ ಮಹಾಮಾರಿ ಏಡ್ಸ್ ಬಂದ ಬಳಿಕ ಕಾಂಡೋಮ್ ಬಳಕೆ ಹೆಚ್ಚು ಪ್ರಚಲಿತವಾಯಿತು.
90 ರ ದಶಕದಲ್ಲಿ ಸಾಕಷ್ಟು ಬಗೆಯ ಬಣ್ಣ, ಫ್ಲೇವರ್ ಗಳಿರುವ ಕಾಂಡೋಮ್ ಗಳು ಮಾರುಕಟ್ಟೆಗೆ ಬಂದವು.