ಶಾಪಿಂಗ್ ಮಾಡೋದು ಅಂದ್ರೆ ಯಾರಿಗೆ ಇಷ್ಟ ಆಗೋಲ್ಲ ಹೇಳಿ. ಅದರಲ್ಲೂ ದೆಹಲಿಯಲ್ಲಿ ಶಾಪಿಂಗ್ ಪ್ರಿಯರ ಸಂಖ್ಯೆ ದಿನದಿನಕ್ಕೂ ಹೆಚ್ಚಾಗ್ತಿರುತ್ತದೆ. ದೇಶದ ರಾಜಧಾನಿಗೆ ಶಾಪಿಂಗೆಂದು ದೇಶದ ಮೂಲೆ ಮೂಲೆಯಿಂದ ಜನರು ಬರ್ತಿರುತ್ತಾರೆ. ಬಟ್ಟೆ, ಪಾದರಕ್ಷೆ, ಬ್ಯಾಗ್ ಮತ್ತು ಮೇಕಪ್ ಕಿಟ್ಗಳಿಗೆ ಇಲ್ಲಿ ತುಂಬಾನೇ ಬೇಡಿಕೆ ಇದೆ. ಅದರಲ್ಲೂ ಇಲ್ಲಿ ಸಿಗುವ ವಿಶೇಷ ಆಭರಣಗಳಿಗೆ ವಿಶ್ವದಾದ್ಯಂತ ಬೇಡಿಕೆ ಇದೆ. ಚಿನ್ನದ ಮತ್ತು ವಜ್ರದ ಆಭರಣ ಅಂದರೆ ಎಲ್ಲರಿಗೂ ಇಷ್ಟ. ಆದರೆ ಇತ್ತಿಚಿನ ದಿನಗಳಲ್ಲಿ ಫಂಕಿ ಜ್ಯುವೆಲ್ಲರಿ ಹೊಸ ಟ್ರೆಂಡ್ ಶುರುವಾಗಿದೆ. ಕಚೇರಿ ಮತ್ತು ಕಾಲೇಜಿಗೆ ಹೋಗುವ ಹುಡುಗಿಯರಿಗೆ ಇಂತಹ ಆಭರಣಗಳು ಫೇವರೆಟ್ ಆಗಿದೆ.
ಈಗ ಇಂತಹ ಫಂಕಿ ಆಭರಣಗಳು ದೆಹಲಿಯ ಮಾರ್ಕೆಟ್ಗಳಲ್ಲಿ ಹೆಚ್ಚಾಗಿ ಸಿಗುತ್ತಿವೆ. ಅದರಲ್ಲೂ ದಾರಿಬಾ ಕಲಾನ್ ಚಾಂದನಿಚೌಕ್ನಲ್ಲಿ ವೆರೈಟಿ ಆಫ್ ಫಂಕಿ ಆಭರಣಗಳು ಮಾರಾಟಕ್ಕಿಟ್ಟಿರುತ್ತಾರೆ. ಇಷ್ಟು ದಿನ ಜನರು ಮೀನಾ ಮಾರುಕಟ್ಟೆಯಲ್ಲಿ ಹಳೆಯ ಚಿನ್ನದ ಲೇಪನವಿರುವ ಇಲ್ಲ ಪ್ಲಾಸ್ಟಿಕ್ ಜ್ಯುವೆಲ್ಲರಿಯನ್ನ ಕೇಳಿ ಖರೀದಿಸುತ್ತಿದ್ದರು. ಆದರೆ ಈಗ ದಾರಿಬಾ ಕಲಾನ್ ಮಾರುಕಟ್ಟೆ ಹೆಚ್ಚು ಪ್ರಸಿದ್ಧಿ ಪಡೆದಿದೆ. ಎಲ್ಲಾ ರೀತಿಯ ಆಭರಣಗಳು ಇಲ್ಲಿ ಸಿಗುತ್ತೆ. ಅದರಲ್ಲೂ ಬೆಳ್ಳಿ ಆಭರಣ ತುಂಬಾ ಅಗ್ಗದ ಬೆಲೆಯಲ್ಲಿ ಇಲ್ಲಿನ ಮಾರುಕಟ್ಟೆಯಲ್ಲಿ ದೊರಕುತ್ತೆ.
ಇನ್ನೂ ನೀವು ದೆಹಲಿಯಗೆ ಹೋಗಿದ್ದೇ ಆದರೆ ಅಲ್ಲಿನ ತಿಬ್ಬತಾನನ್ ಮಾರುಕಟ್ಟೆಗೆ ಒಮ್ಮೆ ಹೋಗಲೇ ಬೇಕು. ಅಲ್ಲಿ ನಿಮಗೆ ಬೊಹೀಮಿಯನ್, ನೋಡೋದಕ್ಕೆ ಅಂದವಾಗಿ ಹಾಗೂ ಐಷಾರಾಮಿಯಾಗಿರುವ ಆಭರಣಗಳು ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗಿರುತ್ತೆ. ಸರ, ಕಂಕಣ, ಬ್ರೇಸ್ಲೈಟ್, ಕಿವಿಯೋಲೆ, ಮೂಗುತಿ ಹೀಗೆ ನಾನಾ ವೆರೈಟಿ ಆಭರಣಗಳು ಇಲ್ಲಿ ಸಿಗುತ್ತೆ.
ದೆಹಲಿಯ ಪಹಾಡ್ಗಂಜ್ ಮಾರುಕಟ್ಟೆಗೆ ಒಂದು ಬಾರಿ ಹೋಗಬೇಕು. ಆ ಒಂದು ಮಾರುಕಟ್ಟೆ ತುಂಬ ಇಕ್ಕಟ್ಟಾದ ಮಾರುಕಟ್ಟೆ. ಆದ್ದರಿಂದ ನೀವು ತುಂಬಾನೆ ಜಾಗರೂಕರಾಗಿ ಅಲ್ಲಿ ಹೋಗಬೇಕು. ಇದೊಂದು ಸಗಟು ವ್ಯಾಪಾರಿ ಮಾರುಕಟ್ಟೆಯಾಗಿದ್ದು, ಇಲ್ಲಿ ಹೋಲ್ಸೇಲ್ ಆಗಿ ವಸ್ತುಗಳನ್ನ ಮಾರಲಾಗುತ್ತೆ. ಕಿವಿಯೋಲೆಗಳು, ನೆಕ್ಲೆಸ್ಗಳು ಮತ್ತು ಉದ್ದವಾದ ಹಾರಗಳು ತಮ್ಮದೇ ಆದ ವಿಶೇಷತೆಗಳನ್ನ ಹೊಂದಿರುತ್ತೆ.
ಇದೇ ದೆಹಲಿಯ ಕೇಂದ್ರಬಿಂದುವಿನಂತಿರೋ ಸರೋಜಿನಿ ಮಾರುಟ್ಟೆಯಲ್ಲಿ ನೀವು ಇಷ್ಟಪಡುವ ಎಲ್ಲಾ ವಸ್ತುವನ್ನ ಒಂದೇ ಕಡೆಯಲ್ಲಿ ಖರೀದಿಸಬಹುದಾಗಿದೆ. ಆದರೆ ಇಲ್ಲಿ ಬಂದರೆ ನಿಮಗೆ ಅಂಗಡಿಗಳನ್ನ ಹುಡುಕುವುದೇ ಮೊದಲ ಸವಾಲು. ಈ ಮಾರುಕಟ್ಟೆಯಲ್ಲಿ ಯಾವಾಗಲೂ ಜನಜಾತ್ರೆ ಇರುತ್ತೆ. ಆರ್ಟಿಫಿಶಿಯಲ್ ಜ್ಯುವೆಲರಿಯ ಎಲ್ಲಾ ವೆರೈಟಿಯನ್ನೂ ಈ ಮಾರುಕಟ್ಟೆಯಲ್ಲಿ ಕಾಣಬಹುದಾಗಿದೆ. ಚಿನ್ನದ ಮತ್ತು ಬೆಳ್ಳಿಯ ಲೇಪಿತ ಆಭರಣಗಳು ಇಲ್ಲಿ ತುಂಬಾ ಅಗ್ಗದ ಬೆಲೆಯಲ್ಲಿ ದೊರಕುತ್ತವೆ.