2021ರಲ್ಲಿ ಬಿಡುಗಡೆಯಾಗಿ ಜಾಗತಿಕ ಮಟ್ಟದಲ್ಲಿ ಅದ್ಧೂರಿ ಯಶಸ್ಸು ಕಂಡು ಭಾರೀ ಕಲೆಕ್ಷನ್ ಮಾಡಿದ ಚಿತ್ರಗಳ ಪಟ್ಟಿ ಇಂತಿದೆ:
ಸ್ಪೈಡರ್ ಮ್ಯಾನ್: ನೋ ವೇ ಹೋಂ – $1.05 ಶತಕೋಟಿ
ಕ್ರಿಸ್ಮಸ್ ವಾರಾಂತ್ಯದ ವೇಳೆ ಸ್ಪೈಡರ್ ಮ್ಯಾನ್: ನೋ ವೇ ಹೋಂ ಚಿತ್ರದ ಬಾಕ್ಸ್ ಆಫೀಸ್ ಸಂಗ್ರಹವು ಶತಕೋಟಿ ಮಟ್ಟ ದಾಟಿದೆ. ಸೋನಿ ಹಾಗೂ ಡಿಸ್ನಿ ಸಹಯೋಗದಲ್ಲಿ ತಯಾರಾದ ಈ ಚಿತ್ರವು, 2021ರಲ್ಲಿ ಶತಕೋಟಿ ಡಾಲರ್ ಮೀರಿ ಕಲೆಕ್ಷನ್ ಮಾಡಿದ ಮೊದಲ ಚಿತ್ರವಾಗಿದೆ. ಈ ಹಿಂದೆ, 2019ರಲ್ಲಿ ’ಸ್ಟಾರ್ ವಾರ್ಸ್: ದಿ ರೈಸ್ ಆಫ್ ಸ್ಕೈವಾಕರ್’ ಚಿತ್ರದ ಕಲೆಕ್ಷನ್ $1 ಶತಕೋಟಿ ಮೀರಿ ಸಂಗ್ರಹಿಸಿತ್ತು.
ದಿ ಬ್ಯಾಟಲ್ ಅಟ್ ಲೇಕ್ ಚಾಂಗ್ಜಿನ್ – $902 ದಶಲಕ್ಷ
ಕೊರಿಯಾ ಯುದ್ಧವೊಂದರ ಸನ್ನಿವೇಶವನ್ನು ಕೈಗೆತ್ತಿಕೊಂಡು ಹೆಣೆಯಲಾದ ಈ ಚೀನೀ ಚಿತ್ರದಲ್ಲಿ, ಚೋಸಿನ್ ಸರೋವರದ ಮೇಲೆ ಹಿಡಿತ ಸಾಧಿಸಲು ಅಮೆರಿಕನ್ ಪಡೆಗಳನ್ನು ಚೀನೀ ಪಡೆಗಳು ಹಿಮ್ಮೆಟಿಸಿದಂತೆ ತೋರಲಾಗಿದೆ. $200 ದಶಲಕ್ಷದ ಬಜೆಟ್‌ನಲ್ಲಿ ನಿರ್ಮಾಣಗೊಂಡ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ $902 ದಶಲಕ್ಷಕ್ಕಿಂತ ಹೆಚ್ಚಿನ ಕಮಾಯಿ ಮಾಡಿದೆ.
ಹೀ ಮಾಮ್ – $822 ದಶಲಕ್ಷ
ಕೌಟುಂಬಿಕ ಪ್ರೀತಿ ಆಧರಿತ ಚೀನೀ ಚಿತ್ರವಾದ ಹೀ ಮಾಮ್‌ನಲ್ಲಿ, ತಾಯಿಯನ್ನು ಕಳೆದುಕೊಂಡು ದುಃಖಭರಿತಳಾದ ಜಿಯಾ ಶಿಯಾಲಿಂಗ್, ಕಾಲಮಾನದಲ್ಲಿ ಹಿಮ್ಮುಖವಾಗಿ ಸಂಚರಿಸಿ, ಅಲ್ಲಿ ತನ್ನ ತಾಯಿಯ ತಾರುಣ್ಯ ರೂಪಿಯನ್ನು ಭೇಟಿ ಮಾಡಿ ಆಕೆಯ ಸ್ನೇಹಿತೆಯಾಗುತ್ತಾಳೆ.
ಚೇತರಿಕೆ ಹಾದಿಯಲ್ಲಿದ್ದ ಚಿತ್ರರಂಗಕ್ಕೆ ಮತ್ತೊಂದು ಶಾಕ್: ಟೈಟ್ ರೂಲ್ಸ್ ಜಾರಿಯಿಂದ ಅಡಕತ್ತರಿಯಲ್ಲಿ ಸಿಲುಕಿದ ನಿರ್ಮಾಪಕರು
ನೋ ಟೈಂ ಟು ಡೈ – $774 ದಶಲಕ್ಷ
ಸದ್ಯದ ಮಟ್ಟಿನ ಜೇಮ್ಸ್ ಬಾಂಡ್ ಡೇನಿಯಲ್ ಕ್ರೇಗ್ ನಟಿಸಿರುವ ಈ ಸ್ಪೈ ಚಿತ್ರದಲ್ಲಿ, ಚಿತ್ರದ ನಾಯಕ ಎಂಐ6ನಲ್ಲಿ ಸಕ್ರಿಯ ಸೇವೆ ತೊರೆದು ಸಿಐಎ ಸೇರಿಕೊಂಡು ಅಪಹರಣಗೊಂಡ ವಿಜ್ಞಾನಿಯೊಬ್ಬರ ತಲಾಶೆಯಲ್ಲಿರುವ ವೇಳೆ ಶತ್ರುಗಳೊಂದಿಗೆ ಹೋರಾಟ ಮಾಡುವುದೇ ಚಿತ್ರದ ಕಥಾ ಹಂದರವಾಗಿದೆ.
ಎಫ್9: ದಿ ಫಾಸ್ಟ್ ಸಾಗಾ – $726 ದಶಲಕ್ಷ
ವಿನ್ ಡೀಸೆಲ್, ಮೈಕೆಲ್ಲಿ ರಾಡ್ರಿಗೆಜ಼್, ಚಾರ್ಲಿ ಥೆರಾನ್‌ರನ್ನು ಪ್ರಮುಖ ತಾರಾಗಣದಲ್ಲಿ ಹೊಂದಿರುವ ಈ ಚಿತ್ರವು ದಿ ಫೇಟ್ ಆಫ್ ಫ್ಯೂರಿಯಸ್ (2017) ಚಿತ್ರದ ಮುಂದುವರೆದ ಭಾಗವಾಗಿದೆ.