ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನ ಗಳಿಸಿ ಅಧಿಕಾರಕ್ಕೇರಲು ಕಾಂಗ್ರೆಸ್ ಸಿದ್ಧತೆ ನಡೆಸುತ್ತಿದ್ದು, ಆಡಳಿತರೂಢ ಬಿಜೆಪಿ ಹೀನಾಯ ಸೋಲು ಅನುಭವಿಸಿ 66 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದೆ. ಇನ್ನು ಜೆಡಿಎಸ್ ಪಕ್ಷಕ್ಕೆ 19 ಸ್ಥಾನ ಲಭಿಸಿದ್ದು, ಹೀಗಾಗಿ ಅಧಿಕೃತ ಪಕ್ಷದ ಸ್ಥಾನಮಾನ ಸಿಗುವುದು ಸಹ ಅನುಮಾನವಾಗಿದೆ.
ಇದರ ಮಧ್ಯೆ ಚುನಾವಣೆಯಲ್ಲಿ 14 ಮಂದಿ ವೈದ್ಯರು ಗೆಲುವು ಸಾಧಿಸಿ ವಿಧಾನಸಭೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದು, ಈ ಪೈಕಿ ಏಳು ಮಂದಿ ಕಾಂಗ್ರೆಸ್ ನವರಾಗಿದ್ದರೆ, ಏಳು ಮಂದಿ ಬಿಜೆಪಿ ಪಕ್ಷದಿಂದ ಆಯ್ಕೆಯಾದವರಾಗಿದ್ದಾರೆ. 14 ಮಂದಿ ವೈದ್ಯರ ಪೈಕಿ 12 ಮಂದಿ ಎಂಬಿಬಿಎಸ್ ಪದವೀಧರರಾಗಿದ್ದು, ಒಬ್ಬರು ದಂತ ವೈದ್ಯ ಹಾಗೂ ಒಬ್ಬರು ಹೋಮಿಯೋಪತಿ ವೈದ್ಯರಾಗಿದ್ದಾರೆ.
ವಿಧಾನಸಭೆಗೆ ಆಯ್ಕೆಯಾದ 14 ವೈದ್ಯರ ಪಟ್ಟಿ ಕೆಳಕಂಡಂತೆ ಇದೆ.
ಡಾ. ಶರಣ ಪ್ರಕಾಶ್ ಪಾಟೀಲ್ (ಸೇಡಂ)
ಡಾ. ಅಜಯ ಸಿಂಗ್ (ಜೇವರ್ಗಿ)
ಡಾ. ಎಚ್.ಸಿ. ಮಹದೇವಪ್ಪ (ಟಿ ನರಸೀಪುರ ಮೀಸಲು)
ಡಾ. ಎಚ್.ಡಿ. ರಂಗನಾಥ್ (ಕುಣಿಗಲ್)
ಡಾ. ಎನ್.ಟಿ. ಶ್ರೀನಿವಾಸ್ (ಕೂಡ್ಲಿಗಿ)
ಡಾ. ಮಂತರ್ ಗೌಡ (ಮಡಿಕೇರಿ)
ಡಾ. ಎಂ.ಸಿ. ಸುಧಾಕರ್ (ಚಿಂತಾಮಣಿ)
ಡಾ. ಸಿ.ಎನ್. ಅಶ್ವತ್ ನಾರಾಯಣ (ಮಲ್ಲೇಶ್ವರ)
ಡಾ. ಎಸ್. ಶಿವರಾಜ್ ಪಾಟೀಲ್ (ರಾಯಚೂರು ನಗರ)
ಡಾ. ಅವಿನಾಶ್ ಜಾಧವ್ (ಚಿಂಚೋಳಿ ಮೀಸಲು)
ಡಾ. ಭರತ್ ಶೆಟ್ಟಿ (ಮಂಗಳೂರು ನಗರ ಉತ್ತರ)
ಡಾ. ಚಂದ್ರು ಲಮಾಣಿ (ಶಿರಹಟ್ಟಿ ಮೀಸಲು)
ಡಾ. ಸಿದ್ದು ಪಾಟೀಲ್ (ಹುಮ್ನಾಬಾದ್)
ಡಾ. ಶೈಲೇಂದ್ರ ಬೆಲ್ದಾಳೆ (ಬೀದರ್ ದಕ್ಷಿಣ)