ಎರಡು ಬೇಯಿಸಿದ ಆಲೂಗಡ್ಡೆ ತಗೆದುಕೊಂಡು ಒಂದು ಬೌಲ್ ಗೆ ಹಾಕಿ ಚೆನ್ನಾಗಿ ಪುಡಿ ಮಾಡಿಕೊಳ್ಳಿ. ನಂತರ ಅದಕ್ಕೆ ಸಣ್ಣಗೆ ಕತ್ತರಿಸಿದ ಹಸಿಮೆಣಸು 1, ½ ಟೀ ಸ್ಪೂನ್ ಶುಂಠಿ ತುರಿ, 2 ಟೇಬಲ್ ಸ್ಪೂನ್ ಕೊತ್ತಂಬರಿ ಸೊಪ್ಪು, ¼ ಕಪ್ ಕಾರ್ನ್ ಫ್ಲೋರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ನಂತರ ಇನ್ನೊಂದು ಬೌಲ್ ಗೆ 1 ¼ ಕಪ್ ಪನ್ನೀರ್ ತುರಿ, ½ ಟೀ ಸ್ಪೂನ್-ಶುಂಠಿ ತುರಿ, ½ ಟೀ ಸ್ಪೂನ್- ಖಾರದಪುಡಿ, ¼ ಟೀ ಸ್ಪೂನ್-ಜೀರಿಗೆ ಪುಡಿ, ½ ಟೀ ಸ್ಪೂನ್-ಚಾಟ್ ಮಸಾಲ, 2 ಟೇಬಲ್ ಸ್ಪೂನ್ ಕೊತ್ತಂಬರಿ ಸೊಪ್ಪು, 2 ಟೇಬಲ್ ಸ್ಪೂನ್ ಪುದೀನಾ, ¼ ಟೀ ಸ್ಪೂನ್ ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
ನಂತರ ಕೈಗೆ ಎಣ್ಣೆ ಸವರಿಕೊಂಡು ಸ್ವಲ್ಪ ಆಲೂಗಡ್ಡೆ ಮಿಶ್ರಣ ತೆಗೆದುಕೊಂಡು ಉಂಡೆಕಟ್ಟಿ ನಿಧಾನಕ್ಕೆ ತಟ್ಟಿಕೊಳ್ಳಿ. ಅದರ ಮಧ್ಯೆ ಸ್ವಲ್ಪ ಪನ್ನೀರ್ ಮಿಶ್ರಣ ಹಾಕಿ ಮತ್ತೆ ಉಂಡೆ ರೀತಿ ಕಟ್ಟಿಕೊಂಡು ನಿಧಾನಕ್ಕೆ ಕೈಯಿಂದ ತಟ್ಟಿಕೊಳ್ಳಿ. ತವಾಕ್ಕೆ ಎಣ್ಣೆ ಹಾಕಿ ಫ್ರೈ ಮಾಡಿಕೊಳ್ಳಿ. ರುಚಿಕರವಾದ ಆಲೂ ಪನ್ನೀರ್ ಟಿಕ್ಕಿ ಸವಿಯಲು ಸಿದ್ಧ.