ಪಾಲಕ್ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರ ಸಾಂಬಾರು, ಪಲ್ಯದಂತೆ ಇದರಿಂದ ಮಾಡುವ ಸೂಪ್ ಕೂಡ ಅಷ್ಟೇ ಚೆನ್ನಾಗಿರುತ್ತದೆ. ಮಾಡುವ ವಿಧಾನ ಸುಲಭವಿದೆ. ಮನೆಯಲ್ಲಿ ಟ್ರೈ ಮಾಡಿ.
ಮಾಡುವ ವಿಧಾನ:
1 ಕಟ್ಟು – ಪಾಲಕ್, ಈರುಳ್ಳಿ – 1, ಬೆಣ್ಣೆ – 1 ಟೇಬಲ್ ಸ್ಪೂನ್, ಹಾಲು – 1/2 ಕಪ್, ಸಕ್ಕರೆ – 1/4 ಟೀ ಸ್ಪೂನ್, ಉಪ್ಪು – ರುಚಿಗೆ ತಕ್ಕಷ್ಟು, ಕಾರ್ನ್ ಫ್ಲೋರ್ – 2 ಟೀ ಸ್ಪೂನ್.
ಬೇಕಾಗುವ ಸಾಮಗ್ರಿಗಳು:
ಮೊದಲಿಗೆ ಪಾಲಕ್ ಅನ್ನು ಚೆನ್ನಾಗಿ ತೊಳೆದು ಕತ್ತರಿಸಿಕೊಳ್ಳಿ. ಈರುಳ್ಳಿಯನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ. ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಬೆಣ್ಣೆ ಹಾಕಿ. ಅದು ಬಿಸಿಯಾಗುತ್ತಲೇ ಈರುಳ್ಳಿ ಸೇರಿಸಿ ಸ್ವಲ್ಪ ಬಾಡಿಸಿ. ನಂತರ ಪಾಲಕ್ ಸೇರಿಸಿ ತುಸು ಬಾಡಿಸಿಕೊಳ್ಳಿ. ಇದಕ್ಕೆ 1 ಕಪ್ ನೀರು, ಸಕ್ಕರೆ ಸೇರಿಸಿ 3 ನಿಮಿಷಗಳ ಕಾಲ ಬೇಯಿಸಿಕೊಂಡು ಗ್ಯಾಸ್ ಆಫ್ ಮಾಡಿ.
ಇದು ತಣ್ಣಗಾದ ಮೇಲೆ ಒಂದು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಿ. ಹಾಲಿನೊಂದಿಗೆ ಕಾರ್ನ್ ಫ್ಲೋರ್ ಅನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಇದನ್ನು ರುಬ್ಬಿದ ಪಾಲಕ್ ಮಿಶ್ರಣಕ್ಕೆ ಸೇರಿಸಿ ಕುದಿಸಿಕೊಳ್ಳಿ. ನೀರು ಬೇಕಿದ್ದರೆ ಸೇರಿಸಿಕೊಳ್ಳಿ. ಕೊನೆಗೆ ಉಪ್ಪು ಹಾಗೂ ಕಾಳುಮೆಣಸಿನ ಪುಡಿ ಸೇರಿಸಿದರೆ ಪಾಲಕ್ ಸೂಪ್ ಸವಿಯಲು ಸಿದ್ಧ.