
ಊಟದ ವೇಳೆ ಉಪ್ಪಿನ ಕಾಯಿ ಇರುವಂತೆಯೇ ಚಟ್ನಿಪುಡಿಗಳು ಇದ್ದರೆ ಚೆನ್ನ. ಬಗೆ ಬಗೆಯ ಚಟ್ನಿ ಪುಡಿಗಳು ಊಟದ ರುಚಿಯನ್ನು ಹೆಚ್ಚಿಸುತ್ತವೆ. ಇಂತಹ ಪುದೀನಾ ಚಟ್ನಿಪುಡಿ ತಯಾರಿಸುವ ಕುರಿತಾದ ಮಾಹಿತಿ ಇಲ್ಲಿದೆ.
ಬೇಕಾಗುವ ಪದಾರ್ಥಗಳು:
ಒಣಗಿದ ಪುದೀನಾ -2 ಕಟ್ಟು, ಒಣಮೆಣಸಿನ ಕಾಯಿ -100 ಗ್ರಾಂ, ಒಣಕೊಬ್ಬರಿ -1 ಗಿಟುಕು, ಕಡಲೆ ಪಪ್ಪು -100 ಗ್ರಾಂ, ಹುಣಸೆಹಣ್ಣು -20 ಗ್ರಾಂ, ಎಣ್ಣೆ -50 ಗ್ರಾಂ, ಉಪ್ಪು –ರುಚಿಗೆ ತಕ್ಕಷ್ಟು.
ತಯಾರಿಸುವ ವಿಧಾನ:
ಮೊದಲಿಗೆ ಬಾಣಲೆಯಲ್ಲಿ ಎಣ್ಣೆ ಹಾಕಿ ಒಲೆಯ ಮೇಲಿಟ್ಟು ಕಾಯಿಸಿರಿ. ಪುದೀನಾ ಎಲೆಗಳನ್ನು ಹಾಕಿ ಹುರಿದುಕೊಳ್ಳಿ. ಒಣಕೊಬ್ಬರಿ ಕೊಬ್ಬರಿ ಚೂರು, ಮೆಣಸಿನಕಾಯಿ ಹಾಕಿ ಹುರಿಯಿರಿ.
ಬಳಿಕ ಕಡಲೆಪಪ್ಪು ಹಾಕಿ ಹುರಿದು ಹುಣಸೆಹಣ್ಣು ಹಾಕಿರಿ. ನಂತರ ಇವುಗಳನ್ನೆಲ್ಲಾ ಪುಡಿ ಮಾಡಿರಿ. ಉಪ್ಪು ಸೇರಿಸಿ ಚಟ್ನಿ ಪುಡಿಯನ್ನು ಬೆರೆಸಿರಿ.
ಸ್ವಲ್ಪ ಕಾಯಿಸಿದ ಎಣ್ಣೆ ಹಾಕಿ ಕಲೆಸಿದ ಬಳಿಕ ಒಣಗಿದ ಬಾಟಲಿಯಲ್ಲಿ ಚಟ್ನಿ ಪುಡಿ ತುಂಬಿರಿ. ಬೇಕೆನಿಸಿದಾಗ ರುಚಿ ನೋಡಿ.