
ಎರಡು ತಿಂಗಳಲ್ಲಿ ಆರರಿಂದ ಏಳು ಕೆಜಿ ತೂಕ ಇಳಿಸುವ ಉಪಾಯ ಇಲ್ಲಿದೆ ಕೇಳಿ.
ಜೀರಿಗೆ ಜೀರ್ಣಕ್ರಿಯೆಗೆ ನೆರವಾಗುತ್ತದೆ. ರಾತ್ರಿ ಮಲಗುವ ಮುಂಚೆ ಒಂದು ಚಮಚ ಜೀರಿಗೆಯನ್ನು ಒಂದು ಲೋಟ ನೀರಿನಲ್ಲಿ ಹಾಕಿ ನೆನೆಸಿಟ್ಟು ಮಲಗಬೇಕು. ಬೆಳಿಗ್ಗೆ ಎದ್ದ ನಂತರ ಜೀರಿಗೆ ನೀರನ್ನು ಕುಡಿಯಬೇಕು. ಎರಡು ತಿಂಗಳು ಈ ನೀರನ್ನು ಕುಡಿಯುತ್ತಿದ್ದರೆ ತೂಕ ಇಳಿಸಿಕೊಳ್ಳಬಹುದು.
ಇದರೊಂದಿಗೆ ಆಹಾರದಲ್ಲಿ ಹೆಚ್ಚು ಹಣ್ಣು – ತರಕಾರಿಗಳನ್ನು ತಿನ್ನಿ. ಹೊರಗೆ ಸಿಗುವ ತಿಂಡಿಗಳನ್ನು ಅಂದರೆ ಗೋಬಿ, ಪಾನಿಪುರಿ ಸೇವನೆ ಬಿಟ್ಟು ಬಿಡಿ. ಕುದಿಸಿದ ನೀರು ಕುಡಿಯುವಾಗಲೂ ಜೀರಿಗೆ ಮತ್ತು ಓಂ ಕಾಳು ಸೇರಿಸಿ ಕುಡಿಯುವುದು ಒಳ್ಳೆಯದು.
ಒಂದು ಲೋಟ ನೀರಿಗೆ ಒಂದು ಚಮಚ ಜೀರಿಗೆ ಹಾಕಿ ಕುದಿಸಿ. ಅದು ಬಿಸಿ ಬಿಸಿಯಾಗಿರುವಾಗಲೇ ರಾತ್ರಿ ಊಟ ಅದ ನಂತರ ಕುಡಿದು ಮಲಗಬೇಕು. ನಂತರ ಬೆಳಿಗ್ಗೆ ನೆನೆಸಿಟ್ಟ ಜೀರಿಗೆ ನೀರನ್ನು ಕುಡಿಯಬೇಕು. ಇದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳಿಲ್ಲ.