alex Certify ಇಲ್ಲಿದೆ ʼಚನ್ನಾ ಮಸಾಲʼ ಮಾಡುವ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ʼಚನ್ನಾ ಮಸಾಲʼ ಮಾಡುವ ವಿಧಾನ

1 ಕಪ್ ಕಾಬೂಲ್ ಕಡಲೆಕಾಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ನಂತರ ಒಂದು ಕುಕ್ಕರ್ ಗೆ 3 ಕಪ್ ನೀರು ಹಾಕಿ 1 ಚಮಚ ಉಪ್ಪು ಹಾಕಿ, ½ ಟೀ ಸ್ಪೂನ್ ಅರಿಶಿನ ಹಾಕಿ 3 ವಿಷಲ್ ಕೂಗಿಸಿಕೊಳ್ಳಿ.

ನಂತರ ಒಂದು ಪ್ಯಾನ್ ಗೆ 4 ಟೇಬಲ್ ಸ್ಪೂನ್ ಎಣ್ಣೆ ಹಾಕಿ ಅದಕ್ಕೆ 1 ಪಲಾವ್ ಎಲೆ, ಸಣ್ಣ ಪೀಸ್ ಚಕ್ಕೆ, 3 ಏಲಕ್ಕಿ, 2 ಲವಂಗ, ½ ಟೀ ಸ್ಪೂನ್ ಸೋಂಪು ಹಾಕಿ. ನಂತರ 3 ಹಸಿಮೆಣಸು, 1 ಟೇಬಲ್ ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಕೈಯಾಡಿಸಿ.

ನಂತರ ಅದಕ್ಕೆ ಸಣ್ಣಗೆ ಹೆಚ್ಚಿಟ್ಟುಕೊಂಡ ಈರುಳ್ಳಿ 3 ಹಾಕಿ. ನಂತರ ಅದಕ್ಕೆ ½ ಟೀ ಸ್ಪೂನ್ ಅರಿಶಿನ ಪುಡಿ, 1 ½ ಟೀ ಸ್ಪೂನ್-ಖಾರದಪುಡಿ, ಕೊತ್ತಂಬರಿ ಪುಡಿ-1 ಟೇಬಲ್ ಸ್ಪೂನ್, 1 ಟೀ ಸ್ಪೂನ್- ಜೀರಿಗೆ ಪುಡಿ, ಗರಂ ಮಸಾಲಾ-1 ಟೀ ಸ್ಪೂನ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

ನಂತರ 3 ಟೊಮೆಟೊ ಹಣ್ಣನ್ನು ಮಿಕ್ಸಿ ಜಾರಿನಲ್ಲಿ ಚೆನ್ನಾಗಿ ರುಬ್ಬಿಕೊಂಡು ಆ ಮಿಶ್ರಣವನ್ನು ಈರುಳ್ಳಿ ಮಿಶ್ರಣಕ್ಕೆ ಸೇರಿಸಿ ಕೈಯಾಡಿಸಿ. ನಂತರ 1 ಟೇಬಲ್ ಸ್ಪೂನ್ ಟೊಮೆಟೊ ಕೆಚಪ್ ಹಾಕಿ ಮಿಕ್ಸ್ ಮಾಡಿ.

ಸಕ್ಕರೆ 1 ಟೀ ಸ್ಪೂನ್ ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ನಂತರ ಬೇಯಿಸಿಟ್ಟುಕೊಂಡ ಕಡಲೆಕಾಳನ್ನು ಇದಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು 15 ನಿಮಿಷಗಳ ಕಾಲ ಬೇಯಿಸಿ.ಆಮೇಲೆ 1 ಟೀ ಸ್ಪೂನ್ ಕಸೂರಿ ಮೇಥಿಯನ್ನು ಪುಡಿ ಮಾಡಿ ಇದರ ಮೇಲೆ ಹಾಕಿ. ಆಮೇಲೆ ಸ್ವಲ್ಪ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...