
ಸ್ನೇಹಿತರ ನಡುವೆ ಅಸೂಯೆ, ಹೊಟ್ಟೆಕಿಚ್ಚು ಇರಬಾರದು ಎಂದು ಹೇಳಿದ್ದನ್ನು ಕೇಳಿದ್ದೇವೆ. ಆದರೆ, ಸ್ನೇಹಕ್ಕೆ ಅಸೂಯೆಯೇ ಕಾರಣ ಎಂದು ಅಧ್ಯಯನವೊಂದು ಹೇಳಿತ್ತು.
ಅರಿಜೋನಾ ಸ್ಟೇಟ್ ಯೂನಿವರ್ಸಿಟಿ, ಒಕ್ಲಾಹೊಮಾ ಸ್ಟೇಟ್ ಯೂನಿವರ್ಸಿಟಿ ಹಾಗೂ ಹ್ಯಾಮಿಲ್ಟನ್ ಕಾಲೇಜ್ ನ ವಿಜ್ಞಾನಿಗಳು ಅಧ್ಯಯನವೊಂದನ್ನು ನಡೆಸಿ, ವ್ಯಕ್ತಿತ್ವ ಹಾಗೂ ಸಾಮಾಜಿಕ ಮನಃಶಾಸ್ತ್ರ ಎಂಬ ಜರ್ನಲ್ ನಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದರು.
ಇಬ್ಬರ ನಡುವೆ ಮೂರನೇ ವ್ಯಕ್ತಿ ಬರಬಹುದು ಎಂಬ ಭಯ, ಅಸೂಯೆ ಇಬ್ಬರ ನಡುವೆ ಸ್ನೇಹವನ್ನು ಮುಂದುವರಿಸಲು ಪ್ರೇರೇಪಿಸುತ್ತದೆ. ರೋಮಾಂಚಕ ಆಸಕ್ತಿಯ ಸ್ನೇಹ ಹಾಗೂ ಔದ್ಯೋಗಿಕ ವಿಷಯವಾದ ಸ್ನೇಹ ಎರಡೂ ವಿಷಯದಲ್ಲಿ ಅಸೂಯೆಯೇ ಸ್ನೇಹದ ಮೂಲ ವಸ್ತು ಎಂದು ಅಧ್ಯಯನಕಾರರು ಹೇಳಿದ್ದಾರೆ.