ಗರ್ಭಿಣಿಯರಿಗೆ ಮುಖ, ಕೈಕಾಲಿನಲ್ಲಿ ಊತ ಕಂಡುಬರುತ್ತದೆ. ಇದರಿಂದ ಅವರಿಗೆ ಕುಳಿತುಕೊಳ್ಳಲು, ನಡೆಯಲು ಕಷ್ಟವಾಗುತ್ತದೆ. ಈ ಊತವನ್ನು ನಿವಾರಿಸಲು ಈ ಟಿಪ್ಸ್ ಫಾಲೋ ಮಾಡಿ.
-ಗರ್ಭಿಣಿಯರು ಹೆಚ್ಚು ಕಾಫಿ ಕುಡಿಯಬೇಡಿ. ಇದರಿಂದ ಮುಖ, ಕೈಕಾಲಿನಲ್ಲಿ ಊತ ಕಂಡುಬರುತ್ತದೆ. ಹಾಗಾಗಿ ಕಾಫಿಯ ಬದಲು ಪುದೀನಾ ಟೀ ಸೇವಿಸಿದರೆ ಉತ್ತಮ.
-ಸೋಡಿಯಂ ಸೇವನೆಯಿಂದ ಗರ್ಭಿಣಿಯರ ಕೈಕಾಲು ಊದಿಕೊಳ್ಳುತ್ತದೆ. ಹಾಗಾಗಿ ಉಪ್ಪಿನ ಸೇವನೆ, ಉಪ್ಪಿನಿಂದ ತಯಾರಿಸಿದ ಆಹಾರದ ಸೇವನೆ ಕಡಿಮೆ ಮಾಡಿ.
-ಗರ್ಭಿಣಿಯರ ದೇಹದಲ್ಲಿ ಪೊಟ್ಯಾಶಿಯಂ ಕಡಿಮೆಯಾದಾಗ ಕೈಕಾಲುಗಳು ಊದಿಕೊಳ್ಳುತ್ತದೆ. ಹಾಗಾಗಿ ಆಲೂಗಡ್ಡೆ, ಪಾಲಕ್, ಕಿತ್ತಳೆ, ಕ್ಯಾರೆಟ್, ಬಾಳೆಹಣ್ಣು , ಸಿಹಿ ಆಲೂಗಡ್ಡೆ ಮೊಸರು ಇತ್ಯಾದಿಯನ್ನು ಸೇವಿಸಿ.
-ಗರ್ಭಿಣಿಯರು ಸಾಕಷ್ಟು ನೀರನ್ನು ಕುಡಿಯಬೇಕು. ಇಲ್ಲವಾದರೆ ದೇಹದಲ್ಲಿ ನೀರಿನಾಂಶ ಕಡಿಮೆಯಾಗಿ ಕೈಕಾಲುಗಳು ಊದಿಕೊಳ್ಳುತ್ತವೆ. ಅದಕ್ಕಾಗಿ ದಿನಕ್ಕೆ 10 ಲೋಟ ನೀರು ಕುಡಿಯಿರಿ.