ಬೆಳ್ಳಿ ಬೇಗನೆ ಕಪ್ಪಾಗುವುದರಿಂದ ಅದನ್ನು ಆಗಾಗ ಸ್ವಚ್ಛ ಮಾಡುತ್ತಾ ಇರಬೇಕು. ಬೆಳ್ಳಿ ಆಭರಣಗಳನ್ನು ತೊಳೆಯಲು ಟೂತ್ ಪೇಸ್ಟ್ ಅಥವಾ ಮೃದುವಾದ ಕಾಟನ್ ಬಟ್ಟೆಯನ್ನು ತೆಗೆದುಕೊಳ್ಳಿ. ಆದರೆ ನೀರಿನ ಬದಲು ಸಿಲ್ವರ್ ಡಿಪ್ ಬಳಸಿದರೆ ಅದರ ಹೊಳಪನ್ನು ಮರಳಿ ಪಡೆಯಬಹುದು.
ಚಿನ್ನ ಮತ್ತು ಪ್ಲಾಟಿನಂ
ಚಿನ್ನ ಮತ್ತು ಪ್ಲಾಟಿನಂ ಅನ್ನು ಬಳಸುತ್ತಾ ಇದ್ದರೆ ಅದರಲ್ಲಿ ಕೊಳೆ ತುಂಬಿ ಬಣ್ಣ ಮಸುಕಾಗುತ್ತದೆ. ಈ ಆಭರಣಗಳನ್ನು ಬಿಸಿ ನೀರಿಗೆ ನೊರೆ ಬರುವಂತೆ ಸೋಪು ಹಾಕಿ ಅದರಲ್ಲಿ ಹಾಕಿಟ್ಟು ತೊಳೆಯಿರಿ. ನಂತರ ಮೃದು ಬಟ್ಟೆಯಿಂದ ಒರೆಸಿ. ಇದನ್ನು ತೆಗೆದು ಇಡುವುದಾದರೆ ಒಂದು ಬಟ್ಟೆಯಲ್ಲಿ ಸುತ್ತಿಡಿ.
ವಜ್ರ
ವಜ್ರದ ಹೊಳಪನ್ನು ನೋಡುವುದೇ ಚೆಂದ. ಆದರೆ ಬಳಸುತ್ತಾ ಇದ್ದರೆ ವಜ್ರದ ಹೊಳಪು ಕೂಡ ಕಡಿಮೆಯಾಗುತ್ತದೆ. ವಜ್ರವನ್ನು ಕೂಡ ಸೋಪ್ ನೀರಿನಲ್ಲಿ ಹಾಕಿಟ್ಟು ತೊಳೆದು ನಂತರ ಮೃದುವಾದ ಕಾಟನ್ ಬಟ್ಟೆಯಲ್ಲಿ ಒರೆಸಿ.
ಮುತ್ತು-ರತ್ನಗಳು
ಮುತ್ತು, ರತ್ನಗಳ ಹೊಳಪು ಹೋಗದಿರಲು ಸುಗಂಧ ದ್ರವ್ಯಗಳನ್ನು ಹಾಕುವಾಗ ಎಚ್ಚರ ವಹಿಸಬೇಕು. ಮುತ್ತು, ರತ್ನ, ಹರಳುಗಳ ಮೇಲೆ ಗೆರೆ ಬೀಳದಂತೆ ಎಚ್ಚರ ವಹಿಸಬೇಕು. ಅದನ್ನು ಬಳಸಿದ ಮೇಲೆ ತಂದು ಜೋಪಾನವಾಗಿ ತೆಗೆದಿಡಿ. ಇದರಿಂದ ಅದರ ಹೊಳಪು ಹೋಗದಂತೆ ತಡೆಯಬಹುದು. ಇದನ್ನು ಸಾಮಾನ್ಯವಾಗಿ ತೊಳೆಯಬಹುದು.