ಅನೇಕರು ಮನೆಯಲ್ಲಿ ಇಲಿಗಳ ಹಾವಳಿಯಿಂದ ತೊಂದರೆ ಅನುಭವಿಸುತ್ತಾರೆ. ಇಲಿಗಳು ಮನೆಯಲ್ಲಿ ಸಂಗ್ರಹಿಸಿಟ್ಟ ಕಾಳು, ಧಾನ್ಯ, ಬಟ್ಟೆ ಹಾಳು ಮಾಡುತ್ತವೆ. ಅಷ್ಟೆ ಏಕೆ ವಾಷಿಂಗ್ ಮಷಿನ್, ಕಾರ್ ಹೀಗೆ ಎಲೆಕ್ಟ್ರಾನಿಕ್ ವಸ್ತುಗಳಿಗೂ ಹಾನಿ ಮಾಡುತ್ತವೆ. ಹಾಗಾಗಿ ಇಲಿಗಳನ್ನು ಓಡಿಸಲು ಔಷಧಿಗಳನ್ನು ಬಳಸುತ್ತಾರೆ. ಇದರಿಂದ ಇಲಿಗಳು ಸತ್ತು ಮನೆಯ ತುಂಬಾ ವಾಸನೆ ಹರಡಬಹುದು. ಹಾಗಾಗಿ ಈ ಮನೆಮದ್ದುಗಳನ್ನು ಬಳಸಿ.
ಪುದೀನಾ : ಇದರ ವಾಸನೆ ಇಲಿಗಳಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ಹಾಗಾಗಿ ಪುದೀನಾ ಎಲೆ ಅಥವಾ ಹೂಗಳನ್ನು ತಂದು ಇಲಿಗಳ ಬಿಲದ ಬಳಿ ಇಡಿ. ಇದರ ವಾಸನೆಗೆ ಇಲಿಗಳು ಓಡಿ ಹೋಗುತ್ತವೆ.
BIG NEWS: MES ಪುಂಡರ ವಿರುದ್ಧ ಖಂಡನಾ ನಿರ್ಣಯ ಅಂಗೀಕಾರ; ಕಿಡಿಗೆಡಿಗಳ ವಿರುದ್ಧ ದೇಶ ದ್ರೋಹ, ಗೂಂಡಾ ಕಾಯ್ದೆ ದಾಖಲು; ಸಿಎಂ ಬೊಮ್ಮಾಯಿ ಘೋಷಣೆ
ಲವಂಗದ ಎಲೆ : ಮಸಾಲೆಗೆ ಬಳಸುವ ಈ ವಸ್ತು ಇಲಿಗಳನ್ನು ಓಡಿಸಲು ಸಹಾಯ ಮಾಡುತ್ತದೆ. ಏಕೆಂದರೆ ಇವುಗಳ ವಾಸನೆ ಇಲಿಗಳಿಗೆ ಇಷ್ಟವಾಗುವುದಿಲ್ಲ. ಹಾಗಾಗಿ ಇದರ ವಾಸನೆ ಅವು ಓಡಿಹೋಗುತ್ತವೆ.
ಕೆಂಪು ಮೆಣಸಿನ ಕಾಯಿ : ಕೆಂಪು ಮೆಣಸಿನ ಕಾಯಿ ಇಲಿಗಳನ್ನು ಓಡಿಸಲು ತುಂಬಾ ಸಹಕಾರಿಯಾಗಿವೆ. ಹಾಗಾಗಿ ಇಲಿಗಳು ಇರುವ ಕಡೆ ಕೆಂಪು ಮೆಣಸಿನ ಪುಡಿಯನ್ನು ಚೆಲ್ಲಿ. ಇದರಿಂದ ಇಲಿಗಳು ಮನೆಯಿಂದ ಓಡಿ ಹೋಗುತ್ತವೆ.
ಈರುಳ್ಳಿ : ಇಲಿಗಳನ್ನು ಓಡಿಸಲು ಇದು ನೈಸರ್ಗಿಕವಾದ ಮಾರ್ಗವಾಗಿದೆ. ಈರುಳ್ಳಿ ವಾಸನೆ ಇಲಿಗಳಿಗೆ ಇಷ್ಟವಾಗುವುದಿಲ್ಲ ಹಾಗಾಗಿ ಇಲಿಗಳು ಬರುವ ಕಡೆ ಈರುಳ್ಳಿಯನ್ನು ಕತ್ತರಿಸಿ ಇಡಿ.