ಅಡುಗೆ ಮನೆಯಿಂದ ಅಂಗಡಿಯವರೆಗೆ ಎಲ್ಲಾ ಕಡೆ ಇಲಿಗಳ ಕಾಟ ಸಾಮಾನ್ಯ. ಮನೆಯಲ್ಲಿ ಇಲಿಗಳಿದ್ರೆ ನಾವು ತಿನ್ನುವ ಆಹಾರಕ್ಕೂ ಸೋಂಕು ತಗುಲುವ ಅಪಾಯವಿರುತ್ತದೆ.
ಎಲ್ಲೆಂದರಲ್ಲಿ ಇಲಿಗಳ ಹಿಕ್ಕೆ, ವಾಸನೆಯಂತೂ ಕಾಮನ್. ಹಾಗಾಗಿ ಇಲಿಗಳನ್ನು ಓಡಿಸಲು ಕೆಲವೊಂದು ಸರಳ ಉಪಾಯಗಳ ಬಗ್ಗೆ ತಿಳಿದುಕೊಳ್ಳಲೇಬೇಕು.
ಇಲಿಗಳು ನಿಮ್ಮ ಅಡುಗೆಮನೆಯಲ್ಲಿ ಗಲೀಜು ಮಾಡಿದರೆ, ವಿದ್ಯುತ್ ತಂತಿಗಳು ಮತ್ತು ಬಟ್ಟೆಗಳನ್ನು ಕತ್ತರಿಸ್ತಾ ಇದ್ರೆ ಇನ್ಮೇಲೆ ಆ ಸಮಸ್ಯೆಗಳು ಇರುವುದೇ ಇಲ್ಲ. ಯಾಕಂದ್ರೆ ಈ ಮನೆಮದ್ದುಗಳನ್ನು ಅಳವಡಿಸಿಕೊಂಡ್ರೆ ಸುಲಭವಾಗಿ ಇಲಿಗಳನ್ನು ಓಡಿಸಬಹುದು.
ಸ್ಫಟಿಕ: ಇದು ಇಲಿಗಳನ್ನು ಓಡಿಸಲು ಪರಿಣಾಮಕಾರಿಯಾಗಿದೆ. ಮೊದಲು ಸ್ಫಟಿಕವನ್ನು ಪುಡಿ ಮಾಡಿಕೊಳ್ಳಿ. ಗೋದಿ ಹಿಟ್ಟಿಗೆ ಸ್ವಲ್ಪ ನೀರು ಬೆರೆಸಿ ಅದನ್ನು ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ. ಆ ಮಿಶ್ರಣಕ್ಕೆ ಸ್ಫಟಿಕದ ಪುಡಿಯನ್ನು ಸೇರಿಸಿ ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ. ಇಲಿಗಳು ಬರುವ ಸ್ಥಳಗಳಲ್ಲಿ ಉಂಡೆಗಳನ್ನು ಇಡಿ. ಅದನ್ನು ತಿಂದ ಇಲಿಗಳು ಸಾಯುತ್ತವೆ ಅಥವಾ ಮನೆಯಿಂದ ಓಡು ಹೋಗುತ್ತವೆ.
ನ್ಯಾಫ್ತಲೀನ್ ಬಾಲ್ಸ್: ನ್ಯಾಫ್ತಲೀನ್ ಗುಳಿಗೆಗಳ ಸಹಾಯದಿಂದ ಕೂಡ ಇಲಿಗಳನ್ನು ಓಡಿಸಬಹುದು. ನಾಫ್ತಲೀನ್ ಚೆಂಡುಗಳ ವಾಸನೆಯಿಂದ ಇಲಿಗಳು ಓಡಿಹೋಗುತ್ತವೆ. ನ್ಯಾಫ್ತಲೀನ್ ಗುಳಿಗೆಗಳನ್ನು ಜಜ್ಜಿ ಪುಡಿ ಮಾಡಿ. ಅದನ್ನು ಗೋದಿ ಹಿಟ್ಟು ಮತ್ತು ನೀರಿನೊಂದಿಗೆ ಮಿಶ್ರಣ ಮಾಡಿ. ಚಿಕ್ಕ ಚಿಕ್ಕ ಉಂಡೆಗಳನ್ನು ಕಟ್ಟಿ ಮನೆಯ ಮೂಲೆಗಳಲ್ಲಿ ಇಡಿ. ಇವುಗಳ ಘಾಟು ತಾಳಲಾರದೆ ಇಲಿಗಳು ಓಡಿ ಹೋಗುತ್ತವೆ.
ಅಡುಗೆ ಸೋಡಾ ಮತ್ತು ಪುದೀನಾ: ಇಲಿಗಳ ಕಾಟದಿಂದ ಮುಕ್ತಿ ಪಡೆಯಲು ನೀವು ಅಡುಗೆ ಸೋಡಾ ಮತ್ತು ಪುದೀನಾವನ್ನು ಸಹ ಬಳಸಬಹುದು. ಸುಮಾರು ಒಂದು ಕಪ್ ಗೋಧಿ ಹಿಟ್ಟನ್ನು ತೆಗೆದುಕೊಳ್ಳಿ. ಅದಕ್ಕೆ ಪುದೀನಾ ಎಣ್ಣೆ ಮತ್ತು ಅಡುಗೆ ಸೋಡಾ ಸೇರಿಸಿ. ಮೂರನ್ನೂ ಚೆನ್ನಾಗಿ ಮಿಕ್ಸ್ ಮಾಡಿ ಉಂಡೆಗಳನ್ನು ಕಟ್ಟಿ. ಆ ಉಂಡೆಗಳನ್ನು ಇಲಿಗಳು ಬರುವ ಜಾಗಗಳಲ್ಲಿ ಇರಿಸಿ. ಹೀಗೆ ಮಾಡುವುದರಿಂದ ಇಲಿಗಳು ಮನೆಯಿಂದ ಪರಾರಿಯಾಗುತ್ತವೆ.