ನಿಮ್ಮ ಮನೆಗಳಲ್ಲಿರೋ ಕೆಂಪಿರುವೆ ಅಥವಾ ಕಪ್ಪು ಇರುವೆಗಳನ್ನ ನೀವು ನೋಡೇ ಇರ್ತಿರಾ. ಆದರೆ ಈ ಇರುವೆಗಳೂ ನಿಮ್ಮ ಮನೆ ಭವಿಷ್ಯ ಹೇಳುತ್ತವೆ ಎನ್ನುತ್ತೆ ವಾಸ್ತು ಶಾಸ್ತ್ರ.
ನಿಮ್ಮ ಮನೆಯಲ್ಲಿ ಕಪ್ಪು ಇರುವೆಗಳನ್ನ ನೀವು ನಿತ್ಯ ನೋಡುತ್ತಾ ಇದ್ದೀರಿ ಎಂದರೆ ನಿಮಗೆ ಒಳ್ಳೆಯ ದಿನಗಳು ಆರಂಭವಾಗಲಿವೆ ಅಂತಾನೇ ಅರ್ಥ. ಕಪ್ಪು ಇರುವೆಗಳನ್ನ ಶುಭ ಸಂಕೇತವಾಗಿ ಪರಿಗಣಿಸಲಾಗುತ್ತೆ. ಹೀಗಾಗಿ ಮನೆಯಲ್ಲಿ ಕಪ್ಪಿರುವೆ ಸೇರಿಕೊಂಡರೆ ಅದರಿಂದ ಮನೆ ಯಜಮಾನನಿಗೆ ಲಾಭವಂತೆ.
ಅಕ್ಕಿ ತುಂಬಿದ ಪಾತ್ರೆ ಇಲ್ಲವೇ ಡಬ್ಬಿಗಳಿಂದ ಕಪ್ಪಿರುವೆ ಹೊರಗೆ ಬರ್ತಾ ಇದ್ರೆ ಅದು ಧನಾಗಮನದ ಸಂಕೇತವಂತೆ. ಅಥವಾ ಮನೆಯಲ್ಲಿನ ದರಿದ್ರ ನಿವಾರಣೆಯಾಗೋ ಮುನ್ಸೂಚನೆ ಅಂತಾ ಹೇಳಲಾಗುತ್ತೆ . ಅದರಲ್ಲೂ ಕಪ್ಪು ಇರುವೆ ಬಾಯಲ್ಲಿ ತನ್ನ ಮೊಟ್ಟೆ ಇಲ್ಲವೆ ಧಾನ್ಯಗಳನ್ನ ಹಿಡಿದುಕೊಂಡಿದ್ದು ಕಂಡರೆ ನಿಮ್ಮ ಸಂಕಷ್ಟಗಳೆಲ್ಲ ದೂರವಾಗುತ್ತಂತೆ. ಹೀಗಾಗಿಯೇ ಹಿಂದಿನ ಕಾಲದ ಜನರು ಮನೆಯಲ್ಲಿ ಕಪ್ಪಿರುವೆ ಕಾಣಿಸಿಕೊಂಡರೆ ಅದಕ್ಕೆ ಸಕ್ಕರೆ, ಗೋಧಿಗಳನ್ನ ಹಾಕುತ್ತಿದ್ದರಂತೆ.
ಆದರೆ ಕೆಂಪು ಇರುವೆಗಳನ್ನ ವಾಸ್ತು ಶಾಸ್ತ್ರ ಅಶುಭದ ಸಂಕೇತವಾಗಿ ಭಾವಿಸುತ್ತೆ. ಮನೆಯಲ್ಲಿ ಕೆಂಪು ಇರುವೆ ಕಾಣಿಸಿಕೊಂಡರೆ ಆ ಮನೆಯಲ್ಲಿ ಸಂಕಷ್ಟಗಳು ಆರಂಭವಾಗುವ ಸೂಚನೆ ಅಂತಾ ಹೇಳಲಾಗುತ್ತೆ.
ಉತ್ತರ ದಿಕ್ಕಿನಿಂದ ಕಪ್ಪು ಇರುವೆ ಬಂದಿದ್ದರೆ ಅದನ್ನ ಶುಭ ಅಂತಾ ಹೇಳಲಾಗುತ್ತೆ. ಕೆಂಪು ಇರುವೆ ಅಶುಭದ ಪ್ರತೀಕ ಎಂದು ಕರೆಯಲಾಗುತ್ತದೆಯಾದರೂ ಪೂರ್ವ ದಿಕ್ಕಿನಿಂದ ಕೆಂಪಿರುವೆ ಬರ್ತಿದ್ದರೆ ಅದನ್ನ ಶುಭ ಅಂತಾನೆ ಹೇಳುತ್ತಾರೆ. ಆದರೆ ಪಶ್ಚಿಮ ದಿಕ್ಕಿನಿಂದ ಕೆಂಪಿರುವೆ ಬರ್ತಿದ್ದರೆ ಅದು ಅಶುಭದ ಸಂಕೇತವಾಗಿದೆ.