ಅಡುಗೆ ಮನೆಗೆ ಇರುವೆ ಬರೋದು ಮಾಮೂಲಿ. ಇರುವೆ ಓಡಿಸಲು ಮಾರುಕಟ್ಟೆಯಲ್ಲಿ ಬಗೆ ಬಗೆಯ ಕೀಟನಾಶಕಗಳು ಸಿಗುತ್ವೆ. ಆದ್ರೆ ಮಕ್ಕಳಿರುವ ಮನೆಯಲ್ಲಿ ಇದನ್ನು ಬಳಸೋದು ಕಷ್ಟ. ಅಂಥವರು ಮನೆಯಲ್ಲಿರುವ ವಸ್ತುಗಳನ್ನು ಬಳಸಿಕೊಂಡು ಇರುವೆಯನ್ನು ಓಡಿಸಬಹುದು.
ಮನೆಯ ಮೂಲೆ ಹಾಗೂ ಇರುವೆಗಳು ಬರುವ ಜಾಗದಲ್ಲಿ ಲವಂಗವನ್ನು ಇಡಿ.
ಬೇವಿನ ಎಲೆ ಕೂಡ ಇರುವೆ ಓಡಿಸಲು ಒಳ್ಳೆಯ ಮದ್ದು. ಕಿಟಕಿ, ಬಾಗಿಲು, ಇರುವೆ ಬರುವ ಜಾಗಗಳಿಗೆ ಬೇವಿನ ಎಲೆಯನ್ನು ಒಣಗಿಸಿ ಪುಡಿ ಮಾಡಿ ಅದನ್ನು ಹಾಕಿ.
ಕಿಟಕಿ ಹಾಗೂ ಬಾಗಿಲಿನ ಬಳಿ ಕರ್ಪೂರವನ್ನಿಡಿ. ಇದ್ರಿಂದ ಇರುವೆಗಳು ಮನೆ ಪ್ರವೇಶ ಮಾಡುವುದಿಲ್ಲ.
ಬೆಳ್ಳುಳ್ಳಿ ವಾಸನೆಗೆ ಇರುವೆ ಓಡಿ ಹೋಗುತ್ತದೆ. ಹಾಗಾಗಿ ಬೆಳ್ಳುಳ್ಳಿ ರಸವನ್ನು ಇರುವೆ ಬರುವ ಸ್ಥಳಕ್ಕೆ ಸಿಂಪಡಿಸಿ.
ಪ್ರತಿದಿನ ನೀರಿಗೆ ಉಪ್ಪು ಹಾಕಿ ಮನೆಯನ್ನು ಸ್ವಚ್ಛಗೊಳಿಸಿ.
ಅರಿಶಿನ ನೀರನ್ನು ಇರುವೆ ಬರುವ ಜಾಗಕ್ಕೆ ಸಿಂಪಡಿಸಿದ್ರೆ ಇರುವೆ ಓಡಿ ಹೋಗುತ್ತದೆ.