alex Certify ಇರುವುದು 68 ಶಾಸಕರು, ಆದರೆ 100ಕ್ಕೂ ಅಧಿಕ ಸಿಎಂ ಆಕ್ಷಾಂಕ್ಷಿಗಳು; ‘ಕೈ’ ಸಿಎಂ ಅಭ್ಯರ್ಥಿ ಕಿತ್ತಾಟಕ್ಕೆ ಬಿಜೆಪಿ ತಿರುಗೇಟು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇರುವುದು 68 ಶಾಸಕರು, ಆದರೆ 100ಕ್ಕೂ ಅಧಿಕ ಸಿಎಂ ಆಕ್ಷಾಂಕ್ಷಿಗಳು; ‘ಕೈ’ ಸಿಎಂ ಅಭ್ಯರ್ಥಿ ಕಿತ್ತಾಟಕ್ಕೆ ಬಿಜೆಪಿ ತಿರುಗೇಟು

ಬೆಂಗಳೂರು: ಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ಅಭ್ಯರ್ಥಿ ಸ್ಥಾನಕ್ಕಾಗಿ ನಡೆಯುತ್ತಿರುವ ಕಿತ್ತಾಟಕ್ಕೆ ತಿರುಗೇಟು ನೀಡಿರುವ ಬಿಜೆಪಿ, ಕಾಂಗ್ರೆಸ್ ಪಕ್ಷದಲ್ಲಿ ಅರಾಜಕತೆ ಎಷ್ಟಿದೆ ಎಂದರೆ, ಇರೋದು 68 ಶಾಸಕರು, ಆದರೆ ಮುಖ್ಯಮಂತ್ರಿ ಪದವಿಯ ಆಕಾಂಕ್ಷಿಗಳು ಮಾತ್ರ ನೂರಕ್ಕೂ ಹೆಚ್ಚು ಎಂದು ಟಾಂಗ್ ನೀಡಿದೆ.

ಪಕ್ಷದ ಅಧಿಕೃತ ಮೂಲದಿಂದಲೇ ನೂರಕ್ಕೂ ಹೆಚ್ಚು ಜನ ಸಿಎಂ ಕುರ್ಚಿಯ ಆಕಾಂಕ್ಷಿಗಳು ನಮ್ಮಲ್ಲಿದ್ದಾರೆ ಎಂದು ಹೇಳಲಾಗಿತ್ತು. ಅದೀಗ ನಿಜವಾಗುತ್ತಿದೆ ಎಂದು ಬಿಜೆಪಿ ಸರಣಿ ಟ್ವೀಟ್ ಮೂಲಕ ವ್ಯಂಗ್ಯವಾಡಿದೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ವಿರುದ್ಧ ಮೂಲ‌ ಕಾಂಗ್ರೆಸ್ಸಿಗರು ಒಟ್ಟಾಗುತ್ತಿದ್ದಾರೆ. ಮುನಿಯಪ್ಪ ಅವರ ಮನೆಯಲ್ಲಿ ನಡೆದ ಗೌಪ್ಯ ಸಭೆಯೇ ಅದಕ್ಕೆ ಸಾಕ್ಷಿಯಾಗಿದೆ. ಉಸ್ತುವಾರಿ ಸುರ್ಜೆವಾಲ ಮಾತಿಗೆ ಕವಡೆ ಕಾಸಿನ‌ ಕಿಮ್ಮತ್ತು ಇಲ್ಲದಂತಾಗಿದೆ. ಕಾಂಗ್ರೆಸ್‌ ಪಕ್ಷದಲ್ಲಿ ಯಾವುದೇ ಬಣವಿಲ್ಲ ಎಂದು ಪಂಚತಂತ್ರ ಕತೆ ಹೆಣೆಯುತ್ತಿದ್ದ ಸಿದ್ದರಾಮಯ್ಯನವರೇ ಮಾಜಿ ಸಚಿವ ಮುನಿಯಪ್ಪ‌‌‌ ಅವರ ನಿವಾಸದಲ್ಲಿ ಪರಮೇಶ್ವರ್, ಹರಿಪ್ರಸಾದ್ ಸಭೆ ನಡೆಸಿದ್ದು ಏಕೆ? ಎಂದು ಪ್ರಶ್ನಿಸಿದೆ.

BIG NEWS: ಕೋವಿಡ್ ಬಾಧಿತ ವಲಯಕ್ಕೆ ವಿಶೇಷ ಪ್ಯಾಕೇಜ್; 8 ಆರ್ಥಿಕ ನೆರವು ಘೋಷಿಸಿದ ಕೇಂದ್ರ ಸರ್ಕಾರ

ಇದೇ ವೇಳೆ ಡಿ.ಕೆ.ಶಿವಕುಮಾರ್ ವಿರುದ್ಧವೂ ತಿರುಗೇಟು ನೀಡಿರುವ ಬಿಜೆಪಿ, ದುರ್ಬಲ ಕೆಪಿಸಿಸಿ ಅಧ್ಯಕ್ಷ ಡಿಕೆಶಿಯವರಿಗೆ ಸಿದ್ದರಾಮಯ್ಯ ಬೆಂಬಲಿಗರನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಮೂಲ ಕಾಂಗ್ರೆಸ್ ನಾಯಕರು ಈ ನಡುವೆ ತಮ್ಮ ದಾಳ ಉರುಳಿಸುತ್ತಿದ್ದು, ದಿನಕ್ಕೊಬ್ಬ ಸಿಎಂ ಆಕಾಂಕ್ಷಿಗಳು ಹುಟ್ಟಿಕೊಳ್ಳುತ್ತಿದ್ದಾರೆ ಎಂದಿದೆ.

ದಲಿತ ನಾಯಕನಿಗೆ ಒಲಿದು ಬಂದಿದ್ದ ಸಿಎಂ ಸ್ಥಾನವನ್ನು ಕುತಂತ್ರದಿಂದ ಕಾಂಗ್ರೆಸ್ ತಪ್ಪಿಸಿತ್ತು. ಈ ನಡುವೆ ಮುಸ್ಲೀಂರಿಗೂ ಅವಕಾಶ ನೀಡಿ ಎಂದು ಸಿ.ಎಂ.ಇಬ್ರಾಹಿಂ ಹೇಳುತ್ತಿದ್ದಾರೆ. ದಲಿತ ಸಿಎಂ ಕೂಗನ್ನು ದಮನಿಸಿರುವ ಕಾಂಗ್ರೆಸ್ ಗೆ ಅಲ್ಪಸಂಖ್ಯಾತರ ಕೂಗನ್ನು ಅಡಗಿಸುವುದು ದೊಡ್ಡ ಕೆಲಸವಲ್ಲ ಎಂದು ಹೇಳಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...