ಚೀನಾ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ವೇಗವಾಗಿ ಹರಡುತ್ತಿರುವ ಕೋವಿಡ್‌ನ ಹೊಸ ರೂಪಾಂತರವು ಮತ್ತೊಮ್ಮೆ ಆತಂಕ ಹುಟ್ಟಿಸಿದೆ, ಚೀನಾದಲ್ಲಿ ಆಸ್ಪತ್ರೆ ಸೇರುತ್ತಿರುವ ಕೋವಿಡ್ ರೋಗಿಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ. ಮುಂದಿನ ಕೆಲವು ತಿಂಗಳುಗಳಲ್ಲಿ ಈ ವೈರಸ್ ಚೀನಾದಾದ್ಯಂತ ಲಕ್ಷಾಂತರ ಸಾವುಗಳಿಗೆ ಕಾರಣವಾಗಬಹುದು ಎಂದು ಊಹಿಸಲಾಗಿದೆ. ಭಾರತದಲ್ಲಿ ಇದುವರೆಗೆ Omicron BF.7 ರೂಪಾಂತರದ ಒಟ್ಟು 4 ಪ್ರಕರಣಗಳು ವರದಿಯಾಗಿವೆ. ಸದ್ಯಕ್ಕೆ ದೇಶದಲ್ಲಿ ಭಯಪಡುವಂತಹ ಸ್ಥಿತಿಯಿಲ್ಲ, ಆದರೆ ಜನರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಅವಶ್ಯಕತೆಯಿದೆ ಎಂದು ಆರೋಗ್ಯ ಅಧಿಕಾರಿಗಳು ಮತ್ತು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಯಾಕಂದ್ರೆ Omicron BF.7 ಅತಿ ಹೆಚ್ಚಿನ ಸೋಂಕಿನ ಪ್ರಮಾಣವನ್ನು ಹೊಂದಿದೆ ಮತ್ತು RT-PCR ಪರೀಕ್ಷೆಯಿಂದ ಇದನ್ನು ಪತ್ತೆ ಮಾಡುವುದು ಕಷ್ಟ. ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವವರಿಗೆ ಈ ವೈರಸ್ ಅತ್ಯಂತ ಅಪಾಯಕಾರಿ. ಅಂಥವರು ವಿಶೇಷ ಕಾಳಜಿ ವಹಿಸಲೇಬೇಕು. ಸಂಶೋಧನೆಯ ಪ್ರಕಾರ ಪ್ರತಿರಕ್ಷಣಾ ವ್ಯವಸ್ಥೆಯು ಪ್ರಬಲವಾಗಿರುವವರಿಗೆ ಬಿಎಫ್.7 ಸೋಂಕಿನ ಅಪಾಯ ಕಡಿಮೆ. ಪ್ರಬಲವಾದ ಇಮ್ಯೂನಿಟಿ ಕರೋನಾದಿಂದ ಮಾತ್ರವಲ್ಲದೆ ಇತರ ಅನೇಕ ವೈರಲ್ ಮತ್ತು ಬ್ಯಾಕ್ಟೀರಿಯಾದ ಸೋಂಕುಗಳ ಅಪಾಯದಿಂದ ನಮ್ಮನ್ನು ಸುರಕ್ಷಿತವಾಗಿರಿಸಲು ಸಹಾಯ ಮಾಡುತ್ತದೆ.
ದುರ್ಬಲ ರೋಗನಿರೋಧಕ ವ್ಯವಸ್ಥೆಯ ಲಕ್ಷಣಗಳು
ಹೆಚ್ಚಿನ ಒತ್ತಡದ ಮಟ್ಟ
ಯಾವಾಗಲೂ ಶೀತ
ಹೊಟ್ಟೆಯಲ್ಲಿ ತೊಂದರೆ
ಚಿಕಿತ್ಸೆಯ ಪರಿಣಾಮ ವಿಳಂಬ
ಮತ್ತೆ ಮತ್ತೆ ಸೋಂಕಿಗೆ ತುತ್ತಾಗುವುದು
ಯಾವಾಗಲೂ ದಣಿವಿನ ಭಾವನೆ
Omicron BF.7 ನ ಗುಣಲಕ್ಷಣಗಳು…
Omicronನ ಉಪರೂಪ BF.7ನ ರೋಗಲಕ್ಷಣಗಳು ಇತರ ಸೋಂಕಿನಂತೆಯೇ ಇರುತ್ತವೆ. ಮೂಗು ಸೋರುವುದು, ಗಂಟಲು ನೋವು, ಜ್ವರ, ಕೆಮ್ಮು, ವಾಂತಿ, ಸುಸ್ತು ಮತ್ತು ಅತಿಸಾರ ಈ ಸೋಂಕಿನ ಪ್ರಮುಖ ಲಕ್ಷಣ. ಇಮ್ಯೂನಿಟಿ ಕಡಿಮೆ ಇರುವವರು ಮತ್ತಯ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರಲ್ಲಿ ಈ ವೈರಸ್‌ನ ಅಪಾಯ ಹೆಚ್ಚಾಗಿರುತ್ತದೆ.
ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು?
ಕೊರೊನಾ ಆತಂಕದ ಬೆನ್ನಲ್ಲೇ ಹೊಸ ವರ್ಷಾಚರಣೆ ಕೂಡ ಹತ್ತಿರ ಬರ್ತಿದೆ. ಹಾಗಾಗಿ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಬೇಕು. ಮಾಸ್ಕ್‌ಗಳನ್ನು ಕಡ್ಡಾಯವಾಗಿ ಧರಿಸಿ. ಸಾಮಾಜಿಕ ಅಂತರದ ನಿಯಮಗಳನ್ನು ಅನುಸರಿಸಿ ಮತ್ತು ನಿಮ್ಮ ಕೈಗಳನ್ನು ಆಗಾಗ್ಗೆ ತೊಳೆಯಲು ಮರೆಯಬೇಡಿ.