alex Certify ಇಬ್ಬರು ಪೊಲೀಸರೂ ಸೇರಿದಂತೆ ದರೋಡೆ ಮಾಡಿದ್ದ 6 ಮಂದಿ ಸರ್ಕಾರಿ ನೌಕರರು ‘ಅಂದರ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಬ್ಬರು ಪೊಲೀಸರೂ ಸೇರಿದಂತೆ ದರೋಡೆ ಮಾಡಿದ್ದ 6 ಮಂದಿ ಸರ್ಕಾರಿ ನೌಕರರು ‘ಅಂದರ್’

ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಚಿಕ್ಕಕುಂತೂರು ಗ್ರಾಮದ ಬಳಿ ಐದು ದಿನಗಳ ಹಿಂದೆ ನಡೆದಿದ್ದ ದರೋಡೆ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆಘಾತಕಾರಿ ಸಂಗತಿ ಎಂದರೆ ದರೋಡೆ ನಡೆಸಿದ ಎಲ್ಲರೂ ಸರ್ಕಾರಿ ನೌಕರರಾಗಿದ್ದು, ಈ ಪೈಕಿ ಇಬ್ಬರು ಪೊಲೀಸರಿದ್ದಾರೆ.

ಜಿಲ್ಲಾ ಸಶಸ್ತ್ರ ಮೀಸಲು ಪಡೆ ಪೇದೆಗಳಾದ ವೇಣುಗೋಪಾಲ್ ಮತ್ತು ಬಸವರಾಜು, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕ ಉದಯ್, ಅರಣ್ಯ ಇಲಾಖೆ ಗಾರ್ಡ್ ನವೀನ್ ಹಾಗೂ ಬೆಸ್ಕಾಂ ನೌಕರರಾದ ಮಾರ್ಕಂಡ ಮತ್ತು ಹರ್ಷದ್ ಬಂಧಿತ ಆರೋಪಿಗಳಾಗಿದ್ದಾರೆ.

ಇವರುಗಳು ನವೆಂಬರ್ 27ರಂದು ಚಿಕ್ಕಕುಂತೂರು ಗೇಟ್ ಬಳಿ ಶಬ್ಬೀರ್ ಎಂಬವರ ಕಾರನ್ನು ಅಡ್ಡಗಟ್ಟಿ ದರೋಡೆ ನಡೆಸಿದ್ದರು. ಈ ಸಂದರ್ಭದಲ್ಲಿ ಆರೋಪಿಗಳು ಪೊಲೀಸ್ ಸಮವಸ್ತ್ರ ಧರಿಸಿದ್ದರು ಎಂದು ಹೇಳಲಾಗಿದೆ. ಇದೀಗ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...