ಬಾಲಿವುಡ್ ನಟಿ ಊರ್ವಶಿ ರೌಟೇಲಾ ಹಾಗೂ ಟೀಂ ಇಂಡಿಯಾ ಆಟಗಾರ ರಿಷಬ್ ಪಂತ್ ನಡುವಿನ ಮಾತಿನ ಚಕಮಕಿಯನ್ನು ಅಭಿಮಾನಿಗಳು ಮರೆತಿಲ್ಲ. ಟಿ20 ವಿಶ್ವಕಪ್‌ಗಾಗಿ ಆಸ್ಟ್ರೇಲಿಯಾದಲ್ಲಿರುವ ಪಂತ್, ಇನ್‌ಸ್ಟಾಗ್ರಾಮ್‌ನಲ್ಲಿ ಕೆಲವು ಫೋಟೋಗಳನ್ನು ಹಾಕಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಪಂತ್ ಕಾಲೆಳೆದಿದ್ದಾರೆ.
ಫೋಟೋದಲ್ಲಿ ರಿಷಬ್ ಪಂತ್ ತಮ್ಮ ಸ್ನೇಹಿತರೊಂದಿಗೆ ವಿಮಾನದ ಮುಂದೆ ನಿಂತಿದ್ದಾರೆ. ಒಳಕ್ಕೆ ಕೋ-ಪೈಲಟ್ ಸೀಟಿನ ಬಳಿ ಪಂತ್ ನಿಂತಿದ್ದು, ಫೋಟೋ ಈಗಾಗ್ಲೇ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. “ಪ್ರತಿ ದಿನವನ್ನೂ ಕೃತಜ್ಞತೆಯ ಹೃದಯದಿಂದ ಪ್ರಾರಂಭಿಸಿ” ಎಂದು ಪಂತ್, ಪೋಸ್ಟ್‌ಗೆ ಶೀರ್ಷಿಕೆ ಸಹ ನೀಡಿದ್ದಾರೆ. ಆದರೆ ಈ ಪೋಸ್ಟ್‌ಗೂ ಊರ್ವಶಿ ರೌಟೇಲಾಗೂ ಸಂಬಂಧ ಕಲ್ಪಿಸಿ ಅಭಿಮಾನಿಗಳು ಬಗೆಬಗೆಯ ಕಮೆಂಟ್‌ಗಳನ್ನು ಹಾಕಿದ್ದಾರೆ.
ಊರ್ವಶಿ ಮನೆಗೆ ಮದುವೆ ಮೆರವಣಿಗೆ ತೆಗೆದುಕೊಂಡು ಹೋಗ್ತಿದ್ದೀರಾ ಅಂತ ಓರ್ವ ಪ್ರಶ್ನೆ ಮಾಡಿದ್ದಾನೆ. ಪಂತ್‌ಗೆ ತಂಡದಲ್ಲಿ ಸ್ಥಾನ ಕೊಡದಂತೆ ಬಾಲಿವುಡ್ ಮಂದಿಯೇ ರೋಹಿತ್ ಶರ್ಮಾಗೆ ಸೂಚಿಸಿದ್ದಾರೆ, ಕೂಡಲೇ ಊರ್ವಶಿಗೆ ಸಾರಿ ಹೇಳಿಬಿಡಿ. ಇಲ್ಲವಾದ್ರೆ ಬಾಲಿವುಡ್ ಮಂದಿ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಅಂತಾ ಮತ್ತೋರ್ವ ಕಾಮಿಡಿಯಾಗಿ ಕಮೆಂಟ್ ಹರಿಬಿಟ್ಟಿದ್ದಾನೆ. ಊರ್ವಶಿ ರೌಟೇಲಾ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 58 ದಶಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ.
ಊರ್ವಶಿ ಹೆಸರು ಕ್ರಿಕೆಟಿಗ ರಿಷಬ್ ಪಂತ್ ಅವರೊಂದಿಗೆ ತಳುಕು ಹಾಕಿಕೊಂಡಿತ್ತು. ‘ಆರ್‌ಪಿ’ ಹೆಸರಿನ ವ್ಯಕ್ತಿಯೊಬ್ಬರು ಹೋಟೆಲ್ ಲಾಬಿಯಲ್ಲಿ ತನಗಾಗಿ ಗಂಟೆಗಳ ಕಾಲ ಕಾಯುತ್ತಿದ್ದರು ಎಂದು ಆಕೆಯೂ ಹೇಳಿದ್ದರು. ಆದ್ರೆ ಇದಕ್ಕೆ ತಿರುಗೇಟು ಕೊಟ್ಟಿದ್ದ ಪಂತ್, ಕೆಲವರು ಜನಪ್ರಿಯತೆಗಾಗಿ ಸುಳ್ಳು ಹೇಳ್ತಾರೆ. ಫೇಮಸ್ ಆಗಲು ಹಪಹಪಿಸುತ್ತಾರೆ ಅಂತಾ ಊರ್ವಶಿ ವಿರುದ್ಧ ಕಿಡಿಕಾರಿದ್ದರು.
ನನ್ನ ಬೆನ್ನು ಬೀಳಬೇಡ ಸಹೋದರಿ ಬಿಟ್ಟು ಬಿಡು ಅಂತಾನೂ ಪಂತ್ ಪೋಸ್ಟ್ ಮಾಡಿದ್ದರು. ಅದಾದ್ಮೇಲೂ ಟೀಂ ಇಂಡಿಯಾದ ಹಲವಾರು ಪಂದ್ಯಗಳನ್ನು ವೀಕ್ಷಿಸಲು ಊರ್ವಶಿ ಮೈದಾನಕ್ಕೆ ಭೇಟಿ ನೀಡಿದ್ದಾರೆ. ಈ ಹಿಂದೆ ಊರ್ವಶಿ ಹಾಗೂ ಪಂತ್ ಡೇಟಿಂಗ್ ಮಾಡುತ್ತಿದ್ದರು ಅಂತಾ ಹೇಳಲಾಗ್ತಿದೆ.
https://www.instagram.com/p/CkfRenTLgWU/?utm_source=ig_embed&ig_rid=ddde334b-3b0d-4be6-9098-7e53e8ddc951