ನೂಡಲ್ಸ್ ಸೇವನೆ ಒಳ್ಳೆಯದಲ್ಲ ಎಂಬುದು ಬಹುತೇಕ ಎಲ್ಲರಿಗೂ ತಿಳಿದ ವಿಷಯವೇ. ಅದರೆ ಬಾಯಿ ಚಪಲ ಕೇಳಬೇಕಲ್ಲ. ಈ ಕಾರಣಕ್ಕೆ ತಿಂಗಳಿಗೊಮ್ಮೆ ಮಾತ್ರ ನೂಡಲ್ಸ್ ಸೇವಿಸಬಹುದು ಎಂಬ ನೆಪ ಇಟ್ಟುಕೊಂಡರೂ ರೆಡಿಯಾಗಿ ಸಿಗುವ ಇನ್ಸ್ಟಂಟ್ ನೂಡಲ್ಸ್ ನಿಂದ ಖಂಡಿತಾ ದೂರವಿರಿ.
ಇದು ಜಂಕ್ ಫುಡ್ ನ ಅತಿ ಕರಾಳ ರೂಪ. ಇದರಲ್ಲಿ ಯಾವುದೇ ರೂಪದ ಪೋಷಕಾಂಶ, ವಿಟಮಿನ್ಸ್ಗಳು ಇಲ್ಲ. ಇದು ನಾಲಿಗೆಗೆ ರುಚಿ ಕೊಡುತ್ತದೆಯೇ ಹೊರತು ಹೊಟ್ಟೆಗಲ್ಲ. ಮಾಡಲು ಸುಲಭ ಹಾಗೂ ತಿನ್ನಲು ರುಚಿಯಾಗಿರುವ ಈ ತಿನಿಸಿನಲ್ಲಿ ಇರುವುದು ವಿಪರೀತ ಶುಗರ್, ಸ್ಯಾಚುರೇಟೆಡ್ ಫ್ಯಾಟ್ ಮತ್ತು ವಿಪರೀತ ಕ್ಯಾಲೊರಿ.
ನೂಡಲ್ಸ್ನಲ್ಲಿ ಹೆಚ್ಚಿರುವ ಸೋಡಿಯಂನಿಂದ ನಿಮ್ಮ ಕಿಡ್ನಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಇದರಿಂದ ಪಾರ್ಶ್ವವಾಯು ಆಗುವ ಸಂಭವವೇ ಹೆಚ್ಚು. ಇದರಲ್ಲಿರುವ ಅತಿ ಹೆಚ್ಚಿನ ಕಾರ್ಬೋಹೈಡ್ರೇಟ್ಗಳಿಂದ ಡಯಾಬಿಟಿಸ್ ಅಥವಾ ಹೃದಯದ ಕಾಯಿಲೆಗಳು ಕಂಡು ಬಂದಾವು.
ಬಿಸಿ ನೀರು ಹಾಕಿದಾಗ ತಯಾರಾಗುವ ತಿನಿಸುಗಳ ಕಪ್ ಗಳಲ್ಲೂ ಕೆಮಿಕಲ್ ಗಳು ಇರುತ್ತವೆ. ಇವು ಮನುಷ್ಯನ ದೇಹದೊಳಕ್ಕೆ ಪ್ರವೇಶಿಸುವುದು ಖಂಡಿತಾ ಒಳ್ಳೆಯದಲ್ಲ.