ಬೆಂಗಳೂರು- ಕಾಂತಾರ ಸಿನಿಮಾ ಸಕ್ಸಸ್ ಅಷ್ಟೆ ಅಲ್ಲ ಅನೇಕರಿಗೆ ಮಾದರಿಯಾಗಿದೆ. ಒಳ್ಳೊಳ್ಳೆ ಕೆಲಸಗಳಿಗೆ ಬುನಾದಿಯಾಗಿದೆ. ದೇಶ ವಿದೇಶಗಳಲ್ಲಿ ಈ ಸಿನಿಮಾ ಸಕ್ಸಸ್ ಕಾಣ್ತಾ ಇದೆ. ದಾಖಲೆ ಮೇಲೆ ದಾಖಲೆ ಬರೆಯುತ್ತಿರುವ ಈ ಸಿನಿಮಾ ಇದೀಗ ಹೂಡಿಕೆದಾರರ ಸಭೆಯಲ್ಲಿ ಸದ್ದು ಮಾಡಿದೆ.
ಹೌದು, ಬೆಂಗಳೂರಿನಲ್ಲಿ ಜಾಗತಿಕ ಹೂಡಿಕೆದಾರರ ʼಇನ್ವೆಸ್ಟ್ ಕರ್ನಾಟಕʼ 2022 ಸಭೆ ನಡೆಯುತ್ತಿದೆ. ಈ ಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಮಾತನಾಡಿದ್ದು ಕಾಂತಾರ ಚಿತ್ರದ ಕುರಿತು ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ. ಹೂಡಿಕೆಯನ್ನ ಕಾಂತಾರ ಮೂವಿಗೆ ಹೋಲಿಸಿದ್ದಾರೆ ಗೋಯಲ್.
ನಾನು ಕೂಡ ಕಾಂತಾರ ಸಿನಿಮಾ ನೋಡಿದೆ. ಅದು ಸಣ್ಣ ಬಜೆಟ್ನ ಸಿನಿಮಾ. ಇದರಲ್ಲಿ ಕರ್ನಾಟಕದ ಸಂಸ್ಕೃತಿ ತೋರಿಸುತ್ತದೆ. ನಾನು ಈ ಚಿತ್ರದ ಬಗ್ಗೆ ಸಿಎಂ ಬಳಿ ಚರ್ಚೆ ಮಾಡಿದೆ. ಎರಡಂಕಿ ಬಜೆಟ್ ಇಂದು 300 ಕೋಟಿಗೂ ಹೆಚ್ಚು ಆದಾಯ ಗಳಿಸಿದೆ. ಹೂಡಿಕೆ ಕೂಡ ಸಣ್ಣದಾಗಿ ಮಾಡಿದ್ರೂ, ದೊಡ್ಡಮಟ್ಟದಲ್ಲಿ ಯಶಸ್ವಿ ಮಾಡಬೇಕಿದೆ ಎಂದು ಹೂಡಿಕೆ ಸಮಾವೇಶದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಗೋಯಲ್.