
ನೆಟ್‌ಫ್ಲಿಕ್ಸ್ ಪಾಸ್‌ವರ್ಡ್‌ಗಳನ್ನು ಶೇರ್ ಮಾಡುವ ಫ್ರೀಲೋಡರ್‌ಗಳಿಗೆ ಬ್ರೇಕ್ ಹಾಕಲು ಹೊಸ ಪಾವತಿ ವಿಧಾನವನ್ನು ಪ್ರಯೋಗಿಸಲಾಗ್ತಿದೆ. ನೆಟ್‌ಫ್ಲಿಕ್ಸ್ ಕಂಪನಿ ಐದು ಲ್ಯಾಟಿನ್ ಅಮೇರಿಕನ್ ರಾಷ್ಟ್ರಗಳಲ್ಲಿ ಹೆಚ್ಚುವರಿ ಮಾಸಿಕ ಶುಲ್ಕಕ್ಕಾಗಿ, ಇನ್ನೊಬ್ಬರಿಗೆ ಪ್ರವೇಶವನ್ನು ಕಾನೂನು ಬದ್ಧವಾಗಿ ಸಕ್ರಿಯಗೊಳಿಸಲು ಅನುಮತಿಸುವ ಫೀಚರ್ ಅನ್ನು ಪರಿಚಯಿಸುತ್ತಿದೆ. ಮುಂದಿನ ತಿಂಗಳಿನಿಂದ ಅರ್ಜೆಂಟೀನಾ, ಡೊಮಿನಿಕನ್ ರಿಪಬ್ಲಿಕ್, ಎಲ್ ಸಾಲ್ವಡಾರ್, ಗ್ವಾಟೆಮಾಲಾ ಮತ್ತು ಹೊಂಡುರಾಸ್‌ನಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ “ಆಡ್ ಎ ಹೋಮ್” ಫೀಚರ್ ಲಭ್ಯವಿರುತ್ತದೆ.
ಪ್ರತಿ ಹೆಚ್ಚುವರಿ ಮನೆಯಲ್ಲಿರುವ ಯಾರಾದರೂ ನಂತರ ಯಾವುದೇ ಸಾಧನದಲ್ಲಿ ನೆಟ್‌ಫ್ಲಿಕ್ಸ್ ಅನ್ನು ಪೂರ್ಣ ಸ್ವತಂತ್ರ ಸದಸ್ಯತ್ವಕ್ಕಿಂತ ಕಡಿಮೆ ವೆಚ್ಚದಲ್ಲಿ ಸ್ಟ್ರೀಮ್ ಮಾಡಲು ಸಾಧ್ಯವಾಗುತ್ತದೆ. ಮಾರ್ಚ್‌ನಲ್ಲಿ ನೆಟ್‌ಫ್ಲಿಕ್ಸ್, ಚಿಲಿ, ಕೋಸ್ಟರಿಕಾ ಮತ್ತು ಪೆರುವಿನಲ್ಲಿ “ಹೆಚ್ಚುವರಿ ಸದಸ್ಯರನ್ನು ಸೇರಿಸಿ” ಎಂಬ ಫೀಚರ್ ಅನ್ನು ಪ್ರಾರಂಭಿಸಿತ್ತು. ಈ ಫೀಚರ್, ಬಳಕೆದಾರರು ತಮ್ಮ ಮನೆಯ ಹೊರಗಿನ ಜನರಿಗೆ ನೆಟ್‌ಫ್ಲಿಕ್ಸ್‌ಗೆ ಪ್ರವೇಶವನ್ನು ನೀಡಲು ಮಾಸಿಕ ಶುಲ್ಕ ಪಾವತಿಸಲು ಅನುವು ಮಾಡಿಕೊಡುತ್ತದೆ.
ನೆಟ್‌ಫ್ಲಿಕ್ಸ್ ಪ್ರಕಾರ, ಬಳಕೆದಾರರು ತಮ್ಮ ಲಾಗಿನ್ ಮಾಹಿತಿಯನ್ನು ವಿಶ್ವದಾದ್ಯಂತ 100 ಮಿಲಿಯನ್‌ಗಿಂತಲೂ ಹೆಚ್ಚು ಪಾವತಿಸದ ಕುಟುಂಬಗಳೊಂದಿಗೆ ಹಂಚಿಕೊಳ್ಳುತ್ತಾರೆ, ಇದರಲ್ಲಿ ಅಮೆರಿಕ ಮತ್ತು ಕೆನಡಾದಲ್ಲಿ ಕಂಪನಿಯ ನಿಯಮ ಉಲ್ಲಂಘಿಸಿದ 30 ಮಿಲಿಯನ್‌ಗಿಂತಲೂ ಹೆಚ್ಚು ಘಟನೆಗಳು ನಡೆದಿವೆ. ನೆಟ್‌ಫ್ಲಿಕ್ಸ್ ಚಂದಾದಾರರಿಗೆ ಅರ್ಜೆಂಟೀನಾದಲ್ಲಿ ತಿಂಗಳಿಗೆ ಪ್ರತಿ ಮನೆಗೆ ARS 219 (ಸುಮಾರು 140 ರೂ.) ಮತ್ತು ಡೊಮಿನಿಕನ್ ರಿಪಬ್ಲಿಕ್, ಹೊಂಡುರಾಸ್, ಎಲ್ ಸಾಲ್ವಡಾರ್ ಮತ್ತು ಗ್ವಾಟೆಮಾಲಾದಲ್ಲಿ ಪ್ರತಿ ಮನೆಗೆ $2.99 (ಸುಮಾರು 240 ರೂ.) ವೆಚ್ಚವಾಗುತ್ತದೆ.
ಸ್ಟ್ರೀಮಿಂಗ್ ಪ್ರವೇಶಕ್ಕಾಗಿ ಹೆಚ್ಚುವರಿ “ಮನೆ” ಮೂಲ ಯೋಜನೆಯನ್ನು ಹೊಂದಿರುವ ಗ್ರಾಹಕರು ಒಂದು ಹೆಚ್ಚುವರಿ ಮನೆಯನ್ನು ಸೇರಿಸಬಹುದು. ಸ್ಟ್ಯಾಂಡರ್ಡ್ ಯೋಜನೆಯನ್ನು ಹೊಂದಿರುವವರು ಎರಡು ಹೆಚ್ಚುವರಿ ಮನೆಗಳನ್ನು ಖರೀದಿಸಬಹುದು ಮತ್ತು ಪ್ರೀಮಿಯಂ ಶ್ರೇಣಿಯ ಚಂದಾದಾರರು ಮೂರು ಹೆಚ್ಚುವರಿ ಮನೆಗಳನ್ನು ಸೇರಿಸಬಹುದು. ಚಿಲಿ, ಕೋಸ್ಟರಿಕಾ ಮತ್ತು ಪೆರುವಿನಲ್ಲಿ ಪ್ರತಿ ತಿಂಗಳು ಹೆಚ್ಚುವರಿ ಸುಮಾರು 160 – 240 ರೂಪಾಯಿ ವೆಚ್ಚ ಮಾಡುವವರು ಎರಡು ಹೆಚ್ಚುವರಿ ಸದಸ್ಯರ ಖಾತೆಗಳನ್ನು ಸೇರಿಸಬಹುದು.
ಪಾಸ್‌ವರ್ಡ್-ಹಂಚಿಕೆ ಪಾವತಿ ಅಪ್‌ಗ್ರೇಡ್ ಯೋಜನೆಗಳನ್ನು ಎಲ್ಲೆಡೆ ಜಾರಿಗೊಳಿಸಿದರೆ ನೆಟ್‌ಫ್ಲಿಕ್ಸ್ ತನ್ನ ವಾರ್ಷಿಕ ಜಾಗತಿಕ ಆದಾಯವನ್ನು 1.6 ಶತಕೋಟಿ ಡಾಲರ್ ಅಂದ್ರೆ 12,800 ಕೋಟಿ ರೂಪಾಯಿ ಹೆಚ್ಚಿಸಬಹುದು ಎಂದು ಅಂದಾಜಿಸಲಾಗಿದೆ.