ಹಾಫ್ ಹೆಲ್ಮೆಟ್ ಹಾಕ್ಬೇಡ್ರಿ ಎಂದು ಜಾಗೃತಿ ಮೂಡಿಸುತ್ತಿದ್ದ ಪೊಲೀಸರು ವಾಹನ ಸವಾರರಿಗೆ ಬುದ್ಧಿ ಕಲಿಸಲು ಹೊಸ ದಾರಿ ಹುಡುಕಿದ್ದಾರೆ. ಇಂದು ಬೆಳಗ್ಗೆಯಿಂದ ಹಾಫ್ ಹೆಲ್ಮೆಟ್ ಬಗ್ಗೆ ಜಾಗೃತಿ ಮಾಡುವಾಗ ವಾಹನ ಸವಾರರಿಂದ ಹೆಲ್ಮೆಟ್ ಗಳನ್ನ ಕಲೆಕ್ಟ್ ಮಾಡಿಕೊಂಡು ಪುಡಿ ಮಾಡಿದ್ದಾರೆ.
ಹೌದು, ಅಪಘಾತದಿಂದಾಗುವ ಸಾವುಗಳ ಸಂಖ್ಯೆಯನ್ನ ಕಡಿಮೆ ಮಾಡಲು ಸಂಪೂರ್ಣ ಕವರ್ ಆಗಿರುವ ಹೆಲ್ಮೆಟ್ ಗಳನ್ನೆ ಬಳಸಬೇಕು ಎಂಬ ನಿಯಮ ತಂದಿರುವ ಪೊಲೀಸರು ಅದನ್ನ ಸಂಪೂರ್ಣವಾಗಿ ಜಾರಿ ತರಲು ಸಂಪೂರ್ಣ ಪ್ರಯತ್ನ ಮಾಡುತ್ತಿದ್ದಾರೆ.
ನಗರದ ಪ್ರತಿಯೊಂದು ಪೊಲೀಸ್ ಠಾಣೆಗಳು ಈ ಕಾನೂನನ್ನ ಸಂಪೂರ್ಣವಾಗಿ ಅನುಸರಿಸುವಂತೆ ಮಾಡಲು ವಿಭಿನ್ನ ಪ್ರಯತ್ನ ಮಾಡುತ್ತಿದ್ದಾರೆ. ಈಗಾಗ್ಲೇ ಇರುವ ದಂಡದ ಅಸ್ತ್ರದ ಜೊತೆಗೆ ಜಾಗೃತಿ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ.
ಈ ವಿಷಯದಲ್ಲಿ ಒಂದೆಜ್ಜೆ ಮುಂದೆ ಹೋಗಿರುವ ಬೆಂಗಳೂರಿನ ಕೆ.ಎಸ್. ಲೇಔಟ್ ಸಂಚಾರಿ ಠಾಣೆ ಪೊಲೀಸರು ವಾಹನ ಸವಾರರಿಂದ ಸಂಗ್ರಹಿಸಿದ್ದ 300 ಹೆಲ್ಮೆಟ್ ಗಳನ್ನ ಒಂದುಕಡೆ ಜೋಡಿಸಿ ಅವುಗಳ ಮೇಲೆ ಲಾರಿ ಹತ್ತಿಸಿದ್ದಾರೆ. ಅಷ್ಟೇ ಅಲ್ಲಾ ಗದ್ದಲ ಸೃಷ್ಟಿಸೋ ಹಾರ್ನ್ ಹಾಗೂ ಸೈಲೆನ್ಸರ್ ಗಳನ್ನ ಪುಡಿಗೈದಿದ್ದಾರೆ.
ಇನ್ಮುಂದೆ ಹಾಫ್ ಹೆಲ್ಮೆಟ್ ಹಾಕಿ ರಸ್ತೆಗಿಳಿಯಂಗಿಲ್ಲ ಎಂದು ಎಚ್ಚರಿಕೆ ನೀಡಿರೋ ಪೊಲೀಸರು, ಅಪ್ಪಿತಪ್ಪಿ ರೂಲ್ಸ್ ಬ್ರೇಕ್ ಮಾಡಿದ್ರು ದಂಡದ ಜೊತೆ ಹೆಲ್ಮೆಟ್ ಗಳನ್ನು ಪುಡಿ ಮಾಡಲಿದ್ದಾರೆ. ಐಎಸ್ಐ ಮುದ್ರೆ ಇರೋ ಸಂಪೂರ್ಣ ಕವರ್ ಆಗೋ ಹೆಲ್ಮೆಟ್ ನಿಯಮವನ್ನ ಪ್ರತಿಯೊಬ್ಬರು ಧರಿಸಬೇಕು ಎಂದು ಎಚ್ಚರಿಕೆ ನೀಡಿರುವ ಪೊಲೀಸರು, ಗದ್ದಲ ಸೃಷ್ಟಿಸೋ ಹಾರ್ನ್ ಗಳು ಹಾಗೂ ಸೈಲೆನ್ಸರ್ ಗಳನ್ನು ಬ್ಯಾನ್ ಮಾಡಿದ್ದಾರೆ.
https://youtu.be/ihTV9HxUy1Y