ಟ್ರೈನ್ ಟಿಕೆಟ್ ಬುಕ್ ಮಾಡಿದ ನಂತರ ಅದು ವೈಟಿಂಗ್ ಲಿಸ್ಟ್ ನಲ್ಲಿ ಇದ್ರಂತೂ ಆಗುವ ಟೆನ್ಷನ್ ಅಷ್ಟಿಟ್ಟಲ್ಲ. ಯಾಕಂದ್ರೆ ಎಲ್ಲಿ ಸೀಟ್ ಸಿಗುತ್ತೋ ಇಲ್ವೋ ಅನ್ನೋ ಭಯ ಅಂತೂ ಇದ್ದೇ ಇರುತ್ತದೆ. ಇದೀಗ ವೈಟಿಂಗ್ ಲಿಸ್ಟ್ ನಲ್ಲಿ ಇರುವ ಟಿಕೆಟ್ ಕನ್ಫರ್ಮ್ ಮಾಡಿಕೊಳ್ಳಲು ಅಥವಾ ಕೊನೆ ಕ್ಷಣದಲ್ಲಿ ಸಮಸ್ಯೆ ಆದರೆ ಅಂತವರಿಗೆ ಉಚಿತವಾಗಿ ವಿಮಾನ ಪ್ರಯಾಣ ಮಾಡುವ ಅವಕಾಶ ನೀಡುತ್ತದೆ ಈ ಆಪ್.
ಹೌದು, ಟಿಕೆಟ್ ಬುಕಿಂಗ್ ಆ್ಯಪ್ ಟ್ರೈನ್ಮ್ಯಾನ್ ಎಂಬ ಈ ಆ್ಯಪ್ನ ಮೂಲಕ ರೈಲು ಟಿಕೆಟ್ ಕಾಯ್ದಿರಿಸಿ, ಅದೇನಾದರೂ ವೇಟಿಂಗ್ ಲಿಸ್ಟ್ನಲ್ಲಿದ್ದು ಕನ್ಫರ್ಮ್ ಆಗದಿದ್ದರೆ ಅಂಥ ಪ್ರಯಾಣಿಕರು ಉಚಿತವಾಗಿ ವಿಮಾನದಲ್ಲಿ ಪ್ರಯಾಣಿಸಬಹುದಾಗಿದೆ. ನೀವು ಬುಕ್ ಮಾಡಿದ ಟಿಕೆಟ್ ನ ಸ್ಥಿತಿಗತಿ ಏನಿದೆ ಎಂಬುದನ್ನು ಕೂಡ ಈ ಆ್ಯಪ್ನ ಮೂಲಕ ನೋಡಬಹುದು. ಇನ್ನು ಇದರಲ್ಲಿ ಪ್ರೆಡಿಕ್ಷನ್ ಮೀಟರ್ ಅಳವಡಿಕೆ ಮಾಡಲಾಗಿದೆ. ಇಲ್ಲಿ ಸೀಟ್ ಸಿಗುವ ಕುರಿತಾಗಿಯೂ ಮಾಹಿತಿ ಸಿಗಲಿದೆ. ಚಾರ್ಟ್ ಸಿದ್ಧಪಡಿಸಿದ ಬಳಿಕವೂ ಟಿಕೆಟ್ ಕನ್ಫರ್ಮ್ ಆಗಿಲ್ಲವೆಂದಾದರೆ ಆಗ ಟ್ರಿಪ್ ಅಶ್ಯೂರೆನ್ಸ್ ಆಯ್ಕೆ ನೆರವಾಗಲಿದೆ. ಕೊನೆಯ ಕ್ಷಣದ ಪರ್ಯಾಯ ಪ್ರಯಾಣದ ಆಯ್ಕೆಯನ್ನು ನೀಡಲಾಗುತ್ತದೆ.
ಟ್ರಿಪ್ ಅಶ್ಯೂರೆನ್ಸ್ ಶುಲ್ಕ ವೆಂದು 1 ರೂಪಾಯಿಯನ್ನು ಪ್ರಯಾಣಿಕರು ಪಾವತಿಸಬೇಕು. ಇನ್ನು ಟಿಕೆಟ್ ಕನ್ಫರ್ಮ್ ಆಗುವ ಸಾಧ್ಯತೆ ಶೇಕಡಾ 90ಕ್ಕಿಂತ ಕಡಿಮೆ ಇದ್ದರೆ ಟಿಕೆಟ್ನ ಶ್ರೇಣಿಗೆ ಅನುಗುಣವಾಗಿ ಸಾಮಾನ್ಯ ಶುಲ್ಕ ಪಾವತಿಸಬೇಕಾಗುತ್ತದೆ. ಚಾರ್ಟ್ ಸಿದ್ಧವಾಗುವ ವೇಳೆಗೆ ಟಿಕೆಟ್ ಕನ್ಫರ್ಮ್ ಆದರೆ ಈ ಶುಲ್ಕ ಪ್ರಯಾಣಿಕರ ಖಾತೆಗೆ ರಿಫಂಡ್ ಆಗುತ್ತದೆ. ವಿಮಾನ ನಿಲ್ದಾಣ ಇರುವ ಕಡೆ ಇದು ಅಪ್ಲೇ ಆಗಲಿದೆ. ಉಳಿದೆಡೆಗೆ ಇನ್ನೇನು ಮಾಡಬಹುದು ಅಂತ ಕಂಪನಿ ಚರ್ಚೆ ನಡೆಸಿದೆ.