alex Certify ಇನ್ಫೋಸಿಸ್ ನಿಂದ 50,000 ಕ್ಕೂ ಅಧಿಕ ಮಂದಿ ನೇಮಕಾತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇನ್ಫೋಸಿಸ್ ನಿಂದ 50,000 ಕ್ಕೂ ಅಧಿಕ ಮಂದಿ ನೇಮಕಾತಿ

ಪ್ರಸಿದ್ಧ ಐಟಿ ಕಂಪನಿಗಳಲ್ಲೊಂದಾದ ಸಾಫ್ಟ್ ವೇರ್ ಕಂಪನಿ ಇನ್ಫೋಸಿಸ್ ಸಾವಿರಾರು ಮಂದಿ ಹೊಸಬರನ್ನು ನೇಮಿಸಿದೆ ಎಂದು ತಿಳಿಸಿದೆ.

ಮಾರ್ಚ್ 2022 ಕ್ಕೆ ಕೊನೆಗೊಳ್ಳುವ ಆರ್ಥಿಕ ವರ್ಷದಲ್ಲಿ 85,000 ಹೊಸಬರನ್ನು ನೇಮಿಸಿಕೊಂಡಿರುವುದಾಗಿ ಹೇಳಿದೆ. ಅದರ ನಾಲ್ಕನೇ ತ್ರೈಮಾಸಿಕ ಫಲಿತಾಂಶಗಳಲ್ಲಿ ಕಂಪನಿಯು ರೂ. 5,686 ಕೋಟಿಗಳ ಏಕೀಕೃತ ನಿವ್ವಳ ಲಾಭವನ್ನು ವರದಿ ಮಾಡಿದೆ.

ಮುಂದಿನ ವರ್ಷ ಇನ್ಫೋಸಿಸ್ ಕಂಪನಿಯು 50,000ಕ್ಕೂ ಹೆಚ್ಚು ಹೊಸ ಮುಖಗಳಿಗೆ ಉದ್ಯೋಗಗಳನ್ನು ಒದಗಿಸಲು ಎದುರು ನೋಡುತ್ತಿದೆ ಎಂದು ಕಂಪನಿಯು ಹೇಳಿದೆ. ಈ ವರ್ಷ 54,396 ಉದ್ಯೋಗಿಗಳನ್ನು ಇನ್ಫೋಸಿಸ್ ನೇಮಿಸಿಕೊಂಡಿತ್ತು. ಕಳೆದ ವರ್ಷ ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತ 85,000 ಹೊಸಬರನ್ನು ನೇಮಿಸಿಕೊಂಡಿರುವುದಾಗಿ ಕಂಪನಿ ಮೂಲಗಳು ತಿಳಿಸಿವೆ. ಕನಿಷ್ಠ 50,000 ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಯೋಜಿಸುತ್ತಿರುವುದಾಗಿ ಹೇಳಿದೆ. ಹಾಗೆಯೇ ಉದ್ಯೋಗಿಗಳ ವೇತನವನ್ನೂ ಹೆಚ್ಚಿಸಲಾಗಿದೆ.

ಜಾಗತಿಕವಾಗಿ ಪ್ರತಿಭಾವಂತರನ್ನು ಅಳೆಯುತ್ತೇವೆ. ಉದ್ಯೋಗಿಗಳಲ್ಲಿ ಹೂಡಿಕೆ ಮಾಡುತ್ತೇವೆ ಮತ್ತು ವಿಸ್ತರಿಸುತ್ತಿರುವ ಮಾರುಕಟ್ಟೆ ಅವಕಾಶವನ್ನು ಬಳಸಿಕೊಳ್ಳಲು ನಾವೀನ್ಯತೆ ಮತ್ತು ಡಿಜಿಟಲ್ ಸಾಮರ್ಥ್ಯಗಳನ್ನು ವೇಗಗೊಳಿಸುವುದಾಗಿ ಬೆಂಗಳೂರು ಮೂಲದ ಐಟಿ ಕಂಪನಿ ಸಿಇಒ ಸಲೀಲ್ ಪರೇಖ್ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...