‘ಮುಂಗಾರು’ ರಾಜ್ಯಕ್ಕೆ ಕಾಲಿಟ್ಟು ವಾರಗಳೇ ಕಳೆಯುತ್ತಾ ಬಂದರೂ ಸಹ ಮಳೆ ಸರಿಯಾಗಿ ಆಗುತ್ತಿಲ್ಲ. ಮೋಡ ಕವಿದ ವಾತಾವರಣ ಇರುತ್ತಾದಾದರೂ ಮಳೆ ಸುರಿಯುತ್ತಿಲ್ಲ. ಇದರಿಂದಾಗಿ ಕೃಷಿ ಚಟುವಟಿಕೆಗಳಿಗೆ ಅಣಿಯಾಗಿದ್ದ ರೈತ ಸಮುದಾಯದಲ್ಲಿ ಆತಂಕ ಮನೆ ಮಾಡಿದೆ.
ಈ ಬಾರಿ ಮುಂಗಾರು ಪೂರ್ವ ಮಳೆ ನಿರೀಕ್ಷೆಗೂ ಮೀರಿ ಸುರಿದಿದ್ದು ಹಳ್ಳಕೊಳ್ಳಗಳು ಭರ್ತಿಯಾಗಿದ್ದವು. ಆದರೆ ಜಲಾಶಯಗಳು ಭರ್ತಿಯಾಗಬೇಕೆಂದರೆ ಮುಂಗಾರು ಮಳೆಯಾಗುವುದು ಅನಿವಾರ್ಯ.
ಮಳೆ ಸಕಾಲಕ್ಕೆ ಆಗದಿದ್ದರೆ ವಿದ್ಯುತ್ ಉತ್ಪಾದನೆ ಮೇಲೂ ಇದು ಪರಿಣಾಮ ಬೀರುವ ಸಾಧ್ಯತೆ ಇದೆ. ಹವಾಮಾನ ತಜ್ಞರು ಮುಂದಿನ ದಿನಗಳಲ್ಲಿ ಉತ್ತಮ ಮುಂಗಾರು ಮಳೆಯಾಗಲಿದೆ ಎಂಬ ಮಾತುಗಳನ್ನು ಹೇಳುತ್ತಿದ್ದು, ರೈತರು ಆಶಾಭಾವನೆಯಿಂದ ಇದರ ನಿರೀಕ್ಷೆಯಲ್ಲಿದ್ದಾರೆ.