ಹೊರಗೆ ಓಡಾಡುವ ಸೂಕ್ಷ್ಮ ತ್ವಚೆ ಹೊಂದಿದ ಮಂದಿ ಸಾಮಾನ್ಯವಾಗಿ ಬ್ಲ್ಯಾಕ್ ಹೆಡ್ ಸಮಸ್ಯೆಯನ್ನು ಎದುರಿಸುತ್ತಾರೆ. ತ್ವಚೆಯ ಮೇಲೆ ಧೂಳು ಕೂರುವುದು, ಒತ್ತಡ ಹಾಗೂ ನಿದ್ರೆಯ ಕೊರತೆಯಿಂದ ಬ್ಲ್ಯಾಕ್ ಹೆಡ್ ಕಾಣಿಸಿಕೊಳ್ಳುತ್ತವೆ ಎನ್ನಲಾಗಿದೆ. ಕೆಲವು ಮನೆಮದ್ದುಗಳ ಮೂಲಕ ಈ ಸಮಸ್ಯೆಯನ್ನು ದೂರಮಾಡುವ ಉಪಾಯವನ್ನು ತಿಳಿಯೋಣ.
ಜೇನುತುಪ್ಪವನ್ನು ಸಣ್ಣ ಸೌಟಿಗೆ ಹಾಕಿ ಚೂರು ಬಿಸಿ ಮಾಡಿ. ಇದನ್ನು ಬ್ಲಾಕ್ ಹೆಡ್ ಇರುವ ಜಾಗಕ್ಕೆ ಹಚ್ಚಿ. ಹದಿನೈದು ನಿಮಿಷದ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ವಾರದ ತನಕ ಹೀಗೆ ಮಾಡುವುದರಿಂದ ಬ್ಲ್ಯಾಕ್ ಹೆಡ್ ಸಮಸ್ಯೆ ನಿವಾರಣೆಯಾಗುತ್ತದೆ.
ನಿಂಬೆರಸವನ್ನು ದಿನಕ್ಕೆ ಮೂರರಿಂದ ನಾಲ್ಕು ಬಾರಿಯಂತೆ ಬ್ಲ್ಯಾಕ್ ಹೆಡ್ ಗಳ ಮೇಲೆ ಹಚ್ಚಿ. ಒಣಗಿದ ಬಳಿಕ ಮುಖ ತೊಳೆಯಿರಿ. ಇದರೊಂದಿಗೆ ಕಡಲೆ ಹಿಟ್ಟು ಬೆರೆಸಿದರೆ ಇಡೀ ಮುಖಕ್ಕೆ ಫೇಸ್ ಪ್ಯಾಕ್ ನಂತೆಯೂ ಹಾಕಿಕೊಳ್ಳಬಹುದು.
ಆಲೂಗಡ್ಡೆಯ ಸಿಪ್ಪೆ ಅಥವಾ ರಸವನ್ನು ಬ್ಲ್ಯಾಕ್ ಹೆಡ್ ಗಳ ಮೇಲೆ ಹಚ್ಚುವುದರಿಂದಲೂ ನಿಮ್ಮ ಸಮಸ್ಯೆಯನ್ನು ದೂರ ಮಾಡಬಹುದು. ಸೌತೆಕಾಯಿ ರಸಕ್ಕೆ ನಿಂಬೆ ಬೆರೆಸಿಯೂ, ಓಟ್ಸ್ ಹಾಗೂ ರೋಸ್ ವಾಟರ್ ಬೆರೆಸಿಯೂ ಮುಖಕ್ಕೆ ಹಚ್ಚಿಕೊಂಡರೆ ಇದೇ ಪರಿಣಾಮ ದೊರೆಯುತ್ತದೆ.