ಜಿಮ್ ಮಾಡುತ್ತಲೇ ಪ್ರಾಣ ಬಿಟ್ಟ ಅನೇಕ ಘಟನೆಗಳನ್ನು ನಾವೆಲ್ಲಾ ಕೇಳಿದ್ದೇವೆ. ಇತ್ತೀಚೆಗೆ ಬೆಂಗಳೂರಿನಲ್ಲೂ ಅಂತಹದೊಂದು ಘಟನೆ ನಡೆದಿತ್ತು. ಇದೀಗ ಕುರ್ಚಿಯಲ್ಲಿ ಕುಳಿತಿದ್ದ ಜಿಮ್ ಟ್ರೈನರ್ ಒಬ್ಬರು ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ ನ ಶಾಲಿಮಾರ್ ಗಾರ್ಡನ್ ಪ್ರದೇಶದಲ್ಲಿ ನಡೆದಿದೆ.
33 ವರ್ಷದ ಆದಿಲ್ ಮೃತ ಜಿಮ್ ಟ್ರೈನರ್. ಈತ ಶಾಲಿಮಾರ್ ಗಾರ್ಡನ್ ಬಳಿಯ ಜಿಮ್ ಒಂದರಲ್ಲಿ ಜಿಮ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಪ್ರತಿದಿನ ವ್ಯಾಯಾಮ ಹಾಗೂ ಜಿಮ್ನಲ್ಲಿ ಅನೇಕ ಕಸರತ್ತುಗಳನ್ನು ಮಾಡುತ್ತಿದ್ದ ಈತನಿಗೆ ಕೆಲವು ದಿನಗಳಿಂದ ಜ್ವರ ಇತ್ತಂತೆ. ಆರೋಗ್ಯ ಸರಿ ಇಲ್ಲದೇ ಇದ್ದರೂ ಈತ ಜಿಮ್ಗೆ ಹೋಗುವುದನ್ನು ನಿಲ್ಲಿಸಿರಲಿಲ್ಲ ಎಂದು ಹೇಳಲಾಗಿದೆ.
ಈತ ಇತ್ತೀಚೆಗೆ ರಿಯಲ್ ಎಸ್ಟೇಟ್ ವ್ಯವಹಾರವನ್ನೂ ಮಾಡುತ್ತಿದ್ದು, ಇದಕ್ಕಾಗಿ ಶಾಲಿಮಾರ್ ಗಾರ್ಡನ್ನಲ್ಲಿ ಕಚೇರಿ ತೆರೆದಿದ್ದರಂತೆ. ಈ ಕಚೇರಿಯಲ್ಲಿ ಕುಳಿತಿದ್ದಾಗಲೇ ಆದಿಲ್ಗೆ ಹೃದಯಾಘಾತವಾಗಿದೆ. ತಕ್ಷಣ ಆತನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಮಾರ್ಗ ಮಧ್ಯೆಯೇ ಉಸಿರು ಚೆಲ್ಲಿದ್ದಾರೆ. ಇನ್ನು ಈ ಘಟನೆ ಸಿಸಿ ಟಿವಿ ದೃಶ್ಯದಲ್ಲಿ ಸೆರೆಯಾಗಿದ್ದು, ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.