alex Certify ಇದೇ ಪ್ರಥಮ ಬಾರಿಗೆ ಹೈಕೋರ್ಟ್ ನೇರ ಕಲಾಪ ಯೂಟ್ಯೂಬ್ ನಲ್ಲಿ ಪ್ರಸಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇದೇ ಪ್ರಥಮ ಬಾರಿಗೆ ಹೈಕೋರ್ಟ್ ನೇರ ಕಲಾಪ ಯೂಟ್ಯೂಬ್ ನಲ್ಲಿ ಪ್ರಸಾರ

ಬೆಂಗಳೂರು: ರಾಜ್ಯ ಹೈಕೋರ್ಟ್ ನ ಪ್ರಧಾನ ಪೀಠದ ಸಂಪೂರ್ಣ ಕಲಾಪ ಪ್ರಪ್ರಥಮ ಬಾರಿಗೆ ಯೂ ಟ್ಯೂಬ್ ನಲ್ಲಿ ನೇರ ಪ್ರಸಾರವಾಗಿದೆ. ಈ ಕಲಾಪವು ಒಂದೂವರೆ ಗಂಟೆ ಕಾಲ ನೇರ ಪ್ರಸಾರವಾಗಿದ್ದು, ಕೋರ್ಟ್ ನ ಎರಡು ಹಾಗೂ ನಾಲ್ಕರ ಹಾಲ್ ನ ಕಲಾಪವನ್ನೂ ಪ್ರಸಾರ ಮಾಡಲು ಸಿದ್ದತೆ ನಡೆಸಲಾಗಿತ್ತಾದರೂ ತಾಂತ್ರಿಕ ಕಾರಣದಿಂದ ಇದು ಸಾಧ್ಯವಾಗಿಲ್ಲ.

ಪ್ರಾಯೋಗಿಕವಾಗಿ ಈ ಕಲಾಪವನ್ನು ಪ್ರಸಾರ ಮಾಡಲಾಗಿದೆ. ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠದ ಕಲಾಪ ಪ್ರಥಮ ಬಾರಿಗೆ ಪ್ರಸಾರವಾಗಿದೆ. ಇದನ್ನು ಸುಮಾರು 2,400 ಜನರು ವೀಕ್ಷಿಸಿದ್ದಾರೆ.

ಅಲ್ಲದೇ, ನ್ಯಾಯಮೂರ್ತಿ ಎಸ್. ಸುಜಾತಾ ನೇತೃತ್ವದ ವಿಭಾಗೀಯ ನ್ಯಾಯಪೀಠದ ಕಲಾಪವನ್ನು ಕೂಡ ಪ್ರಸಾರ ಮಾಡಲಾಗಿತ್ತು.  ಈ ಕಲಾಪ ಕೂಡ ಒಂದೂಕಾಲು ಗಂಟೆಗೂ ಹೆಚ್ಚು ಹೊತ್ತು ಪ್ರಸಾರವಾಗಿತ್ತು. ಇದನ್ನು 1.5 ಸಾವಿರ ಜನರು ನೇರವಾಗಿ ವೀಕ್ಷಿಸಿದ್ದಾರೆ. ಇತ್ತೀಚೆಗಷ್ಟೇ ಕೋರ್ಟ್ ಕಲಾಪವನ್ನು ಯೂಟ್ಯೂಬ್ ನಲ್ಲಿ ಪ್ರಸಾರ ಮಾಡಲಾಗುವುದು ಎಂದು ಕೋರ್ಟ್ ತಿಳಿಸಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...